ಮಹಾತ್ಮ ಗಾಂಧೀಜಿಯ ಮೊಮ್ಮಗ, ನಾಸಾದ ಮಾಜಿ ವಿಜ್ಞಾನಿ ಕಾನುಭಾಯಿ ಗಾಂಧಿ ನಿಧನ
ಸೂರತ್/ಅಹ್ಮದಾಬಾದ್, ನ.8: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಮೊಮ್ಮಗ ಹಾಗೂ ನಾಸಾದ ಮಾಜಿ ವಿಜ್ಞಾನಿ ಕಾನುಭಾಯಿ ಗಾಂಧಿ(87 ವರ್ಷ) ಸೋಮವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಾನುಭಾಯಿ ಅ.22ರಂದು ಹೃದಯಾಘಾತ ಹಾಗೂ ಮೆದುಳು ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಕೆಲವು ದಿನಗಳಿಂದ ಕೋಮಾಸ್ಥಿತಿಗೆ ತಲುಪಿದ್ದ ಅವರು ಮತ್ತೆ ಚೇತರಿಸಿಕೊಳ್ಳಲಿಲ್ಲ. ಗಾಂಧಿ ಅವರು ಪತ್ನಿ ಶಿವಲಕ್ಷ್ಮೀ ಅವರನ್ನು ಅಗಲಿದ್ದಾರೆ.
1930ರ ಮಾರ್ಚ್-ಎಪ್ರಿಲ್‌ನಲ್ಲಿ ನಡೆದಿದ್ದ ಐತಿಹಾಸಿಕ ಉಪ್ಪು ಸತ್ಯಾಗ್ರಹದ ವೇಳೆ ಗುಜರಾತ್‌ನ ದಂಡಿ ಹಳ್ಳಿಯ ಬೀಚ್‌ನಲ್ಲಿ ಮಹಾತ್ಮ ಗಾಂಧಿಯವರ ಊರುಗೋಲಿನ ತುದಿಯನ್ನ್ನು ಹಿಡಿದುಕೊಂಡು ಗಾಂಧೀಜಿಗಿಂತ ಮುಂದಕ್ಕೆ ಹೆಜ್ಜೆ ಹಾಕಿದ್ದ ಕಾನುಭಾಯಿ ಫೋಟೊ ಆ ಕಾಲದಲ್ಲಿ ಎಲ್ಲರ ಗಮನ ಸೆಳೆದಿತ್ತು.
ಕಾನುಭಾಯಿ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟರ್‌ನ ಮೂಲಕ ಶೋಕ ವ್ಯಕ್ತಪಡಿಸಿದ್ದು,‘‘ಗಾಂಧೀಜಿಯ ಮೊಮ್ಮಗ ಕಾನುಭಾಯಿ ನಿಧನದಿಂದ ನನಗೆ ತೀವ್ರ ನೋವಾಗಿದೆ. ಅವರನ್ನು ಹಲವು ಬಾರಿ ಭೇಟಿಯಾದ ನೆನಪು ಈಗಲೂ ಇದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದರು.
‘‘ಕಳೆದ ವರ್ಷ ಅಮೆರಿಕದಿಂದ ವಾಪಸಾದ ಬಳಿಕ ಕನು ದಾದಾ ಕಳೆದ 9 ತಿಂಗಳಿಂದ ಗಾಂಧಿ ಆಶ್ರಮದಲ್ಲಿ ನೆಲೆಸಿದ್ದರು. ಅಜ್ಜನ ಮನೆಯಲ್ಲಿ ಸಾಯಬೇಕೆನ್ನುವ ಬಯಕೆ ಅವರಲ್ಲಿತ್ತು. ಬೇಸರದ ವಿಷಯವೆಂದರೆ ಅದು ಸಾಧ್ಯವಾಗಲಿಲ್ಲ. ಮೊದಲಿಗೆ ಗುಜರಾತ್ ವಿದ್ಯಾಪೀಠಕ್ಕೆ ಸ್ಥಳಾಂತರಗೊಂಡಿದ್ದ ಅವರು ಬಳಿಕ ದಿಲ್ಲಿಯ ವೃದ್ದಾಶ್ರಮಕ್ಕೆ ಸೇರಿದ್ದರು. ಅಲ್ಲಿಂದ ಸೂರತ್‌ಗೆ ವಾಪಸಾಗಿದ್ದರು ಎಂದು ಗಾಂಧಿ ಆಶ್ರಮದ ಎದುರುಗಡೆ ಖಾದಿ ಮಳಿಗೆಯನ್ನು ಹೊಂದಿರುವ ಧಿಮಂತ್ ಬಡಿಯಾ ಹೇಳಿದ್ದಾರೆ.
ಕಾನುಭಾಯಿ ನಿಧನಕ್ಕೆ ಗುಜರಾತ್ ಕಾಂಗ್ರೆಸ್ ಶೋಕ ವ್ಯಕ್ತಪಡಿಸಿದೆ.
1928ರಲ್ಲಿ ಬಾಪೂಜಿಯ ಮೂರನೆ ಮಗ ರಾಮ್‌ದಾಸ್ ಮಗನಾಗಿ ಕಾನುಭಾಯಿ ಜನಿಸಿದ್ದರು. ಕಾನುಭಾಯಿ ಗಾಂಧೀಜಿಯ ಅಚ್ಚುಮೆಚ್ಚಿನ ಮೊಮ್ಮಗನಾಗಿದ್ದರು. ಕಾನುಭಾಯಿಗೆ 17 ವರ್ಷವಾಗಿದ್ದಾಗ ಗಾಂಧೀಜಿ ದಿಲ್ಲಿಯಲ್ಲಿ ಹತ್ಯೆಯಾಗಿದ್ದರು.
ಬಾಪೂಜಿಯ ನಿಧನದ ಬಳಿಕ ಕಾನುಭಾಯಿ ಜೀವನದಲ್ಲಿ ಮಹತ್ತರ ಬದಲಾವಣೆಯಾದವು. ಜವಾಹರಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಅಮೆರಿಕದ ರಾಯಭಾರಿ ಜಾನ್ ಕೆನ್ನತ್‌ರನ್ನು ಭೇಟಿಯಾಗಿ ಕಾನುಭಾಯಿ ಅವರನ್ನು ಉನ್ನತ ಶಿಕ್ಷಣಕ್ಕಾಗಿ ಅಮೆರಿಕದ ಎಂಐಟಿ ಸಂಸ್ಥೆಗೆ ಸೇರಿಸಿದ್ದರು. ಅಲ್ಲಿ ಅವರು ಗಣಿತದಲ್ಲಿ ಉನ್ನತ ಅಧ್ಯಯನ ನಡೆಸಿದ್ದರು.
ವಿವಾಹದ ಬಳಿಕ ಕಾನುಭಾಯಿ ಹಾಗೂ ಅವರ ಪತ್ನಿ ಶಿವಲಕ್ಷ್ಮೀ ಅಮೆರಿಕದ ವರ್ಜಿನಿಯದ ಹ್ಯಾಂಪ್ಟನ್‌ನಲ್ಲಿ ವಾಸವಾಗಿದ್ದರು. ಕಾನುಭಾಯಿ ನಾಸಾ ಲ್ಯಾಂಗ್ಲಿ ರಿಸರ್ಚ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಅಮೆರಿಕದಲ್ಲಿ ಹಲವು ವರ್ಷ ಕಳೆದ ಬಳಿಕ ಕನುಬಾಯಿ ದಂಪತಿ ಭಾರತಕ್ಕೆ ವಾಪಸಾಗಿದ್ದರು.
ಭಾರತಕ್ಕೆ ವಾಪಸಾದ ಬಳಿಕ ಯಾರಿಗೂ ಭಾರವಾಗಿರಲು ಬಯಸದ ಕಾನುಭಾಯಿ ದಂಪತಿ ಭಾರತದಲ್ಲಿ ಇರುವಷ್ಟು ಕಾಲ ವೃದ್ದಾಶ್ರಮದಲ್ಲಿ ದಿನ ಕಳೆದರು.
ಬಾಪೂಜಿಯ ನಿಧನದ ಬಳಿಕ ಕನುಬಾಯಿ ಜೀವನದಲ್ಲಿ ಮಹತ್ತರ ಬದಲಾವಣೆಯಾದವು. ಜವಾಹರಲಾಲ್ ನೆಹರೂ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಅಮೆರಿಕದ ರಾಯಭಾರಿ ಜಾನ್ ಕೆನ್ನತ್‌ರನ್ನು ಭೇಟಿಯಾಗಿ ಕನುಬಾಯಿ ಅವರನ್ನು ಉನ್ನತ ಶಿಕ್ಷಣಕ್ಕಾಗಿ ಅಮೆರಿಕದ ಎಂಐಟಿ ಸಂಸ್ಥೆಗೆ ಸೇರಿಸಿದ್ದರು. ಅಲ್ಲಿ ಅವರು ಗಣಿತದಲ್ಲಿ ಉನ್ನತ ಅಧ್ಯಯನ ನಡೆಸಿದ್ದರು.
ವಿವಾಹದ ಬಳಿಕ ಕನುಬಾಯಿ ಹಾಗೂ ಅವರ ಪತ್ನಿ ಶಿವಲಕ್ಷ್ಮೀ ಅಮೆರಿಕದ ವರ್ಜಿನಿಯದ ಹ್ಯಾಂಪ್ಟನ್‌ನಲ್ಲಿ ವಾಸವಾಗಿದ್ದರು. ಕನುಬಾಯಿ ನಾಸಾ ಲ್ಯಾಂಗ್ಲಿ ರಿಸರ್ಚ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಅಮೆರಿಕದಲ್ಲಿ ಹಲವು ವರ್ಷ ಕಳೆದ ಬಳಿಕ ಕನುಬಾಯಿ ದಂಪತಿ ಭಾರತಕ್ಕೆ ವಾಪಸಾಗಿದ್ದರು.
ಭಾರತಕ್ಕೆ ವಾಪಸಾದ ಬಳಿಕ ಯಾರಿಗೂ ಭಾರವಾಗಿರಲು ಬಯಸದ ಕನುಬಾಯಿ ದಂಪತಿ ಭಾರತದಲ್ಲಿ ಇರುವಷ್ಟು ಕಾಲ ವೃದ್ದಾಶ್ರಮದಲ್ಲಿ ದಿನ ಕಳೆದರು.