ಜಿಲ್ಲಾಕೋರ್ಟಿನ ಮುಂದೆ ಹೆತ್ತಳಾ ಈ ತಾಯಿ!
ಕೋಝಿಕ್ಕೋಡ್, ನ. 8: ಜಿಲ್ಲಾ ಕೋರ್ಟಿನ ಮುಂಭಾಗದಲ್ಲಿ ಮಾನಸಿಕಅಸ್ವಸ್ಥ ಯುವತಿಯೊಬ್ಬಳು ಮಗುವಿಗೆ ಜನ್ನ ನೀಡಿದ್ದಾಳೆ ಎಂದು ವರದಿಯಾಗಿದೆ. ಹೆರಿಗೆಯಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಮೆಡಿಕಲ್ ಕಾಲೇಜಿನ ಮಾತೃಶಿಶು ಸಂರಕ್ಷಣಾ ಕೇಂದ್ರಕ್ಕೆ ಸೇರಿಸಲಾಗಿದೆ. ಒಡಿಶಾ ಮೂಲದ ಈ ಯುವತಿ ವೆಳ್ಳಿಮಾಡಕುನ್ನು ಸಾಮಾಜಿಕ ನ್ಯಾಯ ಸಮುಚ್ಚಯದ ತಾತ್ಕಾಲಿಕ ನಿವಾಸದಲ್ಲಿ ವಾಸವಿದ್ದರು ಎನ್ನಲಾಗಿದೆ. ಅಲೆಮಾರಿ ವಿಭಾಗಕ್ಕೆ ಸೇರಿದ್ದ ಯುವತಿಯನ್ನು ಸುಮತಿ ಎಂದು ಗುರುತಿಸಲಾಗಿದ್ದು, ಮಧ್ಯಾಹ್ನ ಎರಡುಗಂಟೆಯ ವೇಳೆಗೆ ಆಕೆಗೆ ಹೆರಿಗೆಯಾಗಿದೆ.ಮಾನಸಿಕ ಅಸ್ವಸ್ಥಳಾದ ಯುವತಿಯನ್ನು ಸೋಮವಾರ ಬೆಳಗ್ಗೆ ವೈದ್ಯಕೀಯ ತಪಾಸಣೆಗಾಗಿ ಬೀಚ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಯುವತಿ ತಪಾಸಣೆಗೆ ಒಪ್ಪದೆ ಗಲಾಟೆ ಮಾಡಿದ್ದಳು. ತಾತ್ಕಾಲಿಕ ನಿವಾಸದ ಅಧಿಕಾರಿಗಳು ಮಹಿಳಾ ಹೆಲ್ಫ್‌ಲೈನ್‌ಗೆ ವಿವರ ನೀಡಿದ್ದರು. ನಂತರ ಮಹಿಳಾ ಪೊಲೀಸರ ನೆರವಿನಿಂದ ಮ್ಯಾಜಿಸ್ಟ್ರೇಟ್ ಮುಂದೆ ಆಕೆಯನ್ನು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಸಿದ್ಧತೆ ನಡೆಸಲು ಯೋಚಿಸಲಾಗಿತ್ತು. ಮಧ್ಯಾಹ್ನ ದೂಟದ ವಿರಾಮವಾದ್ದರಿಂದ ಮ್ಯಾಜಿಸ್ಟ್ರೇಟ್‌ರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದೇವೇಳೆ ಯುವತಿಗೆ ಹೆರಿಗೆನೋವು ಬಂದು ಆಕೆ ಹೆತ್ತಿದ್ದಾಳೆ. ಆಕೆ ಮಗು ಹುಟ್ಟುವಾಗಲೇ ಮೃತ್ಯುವನ್ನಪ್ಪಿತ್ತು ಎಂದು ವರದಿ ತಿಳಿಸಿದೆ.