ಉತ್ತರಪ್ರದೇಶದಲ್ಲಿ ಎಸ್ಪಿ,ಬಿಎಸ್ಪಿ ಅಧಿಕಾರಕ್ಕೆ ಬರುವುದಿಲ್ಲ: ಉಮಾಭಾರತಿ

Update: 2016-11-08 11:01 GMT

ಲಲಿತ್‌ಪುರ್,ನ. 8: ಸಮಾಜವಾದಿ ಪಾರ್ಟಿಮತ್ತು ಬಹುಜನಸಮಾಜವಾದಿ ಪಾರ್ಟಿ ಈಸಲ ಉತ್ತರಪ್ರದೇಶದಲ್ಲಿ ಸರಕಾರ ರಚಿಸುವುದಿಲ್ಲ ಯಾಕೆಂದರೆ ಜನರು ಬದಲಾವಣೆ ಬಯಸುತ್ತಿದ್ದಾರೆಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಹೇಳಿದ್ದಾರೆಂದು ವರದಿಯಾಗಿದೆ. ಪರಿವರ್ತನಾ ಯಾತ್ರಾ ಜಾಥವನ್ನು ಉದ್ದೇಶಿಸಿ ಮಾತಾಡಿದ ಅವರು ಮಾಯಾವತಿ ಪರಿವರ್ತನಾ ಯಾತ್ರೆಯನ್ನು ಒಂದು ನಾಟಕ ಎಂದು ಕರೆದಿದ್ದಾರೆ. ಆದರೆ ಅವರು ಮುಚ್ಚಿದ ಕೋಣೆಯೊಳಗಿರುವವರು ಅವರಿಗೆ ಜನರ ನಾಡಿಮಿಡಿತ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ತನ್ನನ್ನು ಬುಂದೇಲ್‌ಖಂಡ್‌ನ ಪುತ್ರಿ ಎಂದು ಕರೆದ ಉಮಾಭಾರತಿ ಬುಂದೇಲ್ ಖಂಡದಲ್ಲಿ 2030ರೊಳಗೆ ನೀರಾವರಿ ಕ್ರಾಂತಿ ತರುತ್ತೇನೆ. ಇದಕ್ಕಾಗಿ ಅರ್ಧ ಆಗಿರುವ ಕಾಮಗಾರಿಗಳನ್ನು ಪೂರ್ತಿಮಾಡುತ್ತೇನೆ ಎಂದು ಜನರಿಗೆ ಭರವಸೆ ನೀಡಿದ್ದಾರೆ.

ಪ್ರಧಾನಿ ಮೋದಿ ಬುಂದೇಲ್ ಖಂಡದ ಸ್ಥಿತಿಗೆ ಬಹಳ ಚಿಂತಿತರಾಗಿದ್ದಾರೆ:

 ಪ್ರಧಾನಿ ನರೇಂದ್ರಮೋದಿ ಬುಂದೇಲ್ ಖಂಡದ ಬಗ್ಗೆ ತುಂಬ ಚಿಂತಿತರಾಗಿದ್ದಾರೆ. ನಬಾರ್ಡ್‌ನಿಂದ ಹಣ ಸಾಲಪಡೆದು ಬುಂದೇಲ್‌ಖಂಡದ ಅಭಿಕಾರ್ಯಕೈಗೊಳ್ಳುವಂತೆ ಪ್ರಧಾನಿಸೂಚಿಸಿದ್ದಾರೆ ಎಂದು ಉಮಾಭಾರತಿ ಹೇಳಿದ್ದಾರೆ. ಕೇಂದ್ರದಿಂದ ರಾಜ್ಯ ಅಭಿವೃದ್ಧಿಗಾಗಿ ಉತ್ತರಪ್ರದೇಶಕ್ಕೆ ಹಣ ಕಳುಹಿಸಲಾಗುತ್ತಿದೆ. ಆದರೆ ರಾಜ್ಯಸರಕಾರ ಸೌಲಭ್ಯಗಳನ್ನು ಜನರ ಬಳಿ ತಲುಪಿಸಲು ವಿಫಲವಾಗಿದೆ ಎಂದು ಅಖಿಲೇಶ್ ಸರಕಾರವನ್ನು ಅವರು ಟೀಕಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಸೈನಿಕರ ಅಪಮಾನವಾಗಿದೆ:

ಉತ್ತರಪ್ರದೇಶದಲ್ಲಿ ಗಡಿಯಲ್ಲಿಹೋರಾಡುತ್ತಿರುವ ಸೈನಿಕರನ್ನು ಅಪಮಾನಿಸಲಾಗುತ್ತಿದೆ. ಪ್ರದೇಶದ ಪರಿಸ್ಥಿತಿ ಅಖಿಲೇಶ್ ಮತ್ತು ಅವರ ಚಿಕ್ಕಪ್ಪನ ಕಲಹದಲ್ಲಿ ಲೀನವಾಗಿದೆ. ಇಬ್ಬರು ಪರಸ್ಪರ ಕಾಲೆಳೆಯಲು ಹವಣಿಸುತ್ತಿದ್ದಾರೆ. ಮಧ್ಯಪ್ರದೇಶ, ಛತ್ತೀಸ್‌ಗಡ, ಗುಜರಾತ್ ಹೀಗೆ ಬಿಜೆಪಿ ಸರಕಾರ ಇರುವಲ್ಲಿ ತುಂಬ ಒಳ್ಳೆಯ ಕೆಲಸಗಳಾಗಿವೆ. ಆದ್ದರಿಂದ ಜನರು ಬಿಜೆಪಿಯನ್ನು ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ತರಬೇಕೆಂದು ಉಮಾಭಾರತಿ ವಿನಂತಿಸಿದ್ದಾರೆಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News