ಆತ್ಮಹತ್ಯೆಯ ವರ್ಷದ ಬಳಿಕ ಬಯಲಾಯ್ತು ಕಾರಣ!

Update: 2016-11-08 15:01 GMT

ಮಗಳ ಆತ್ಮಹತ್ಯೆಯಿಂದ ನೊಂದುಕೊಂಡಿದ್ದ ಕುಟುಂಬಕ್ಕೆ ಅದೃಷ್ಟವಶಾತ್ ವರ್ಷದ ಮೇಲೆ ಅಂತಿಮವಾಗಿ ಮಗಳ ಸಾವಿನ ರಹಸ್ಯ ತಿಳಿಯುವ ಅವಕಾಶ ಸಿಕ್ಕಿದೆ. ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯಕ್ಕೆ ಮಗಳ ಸಾವಿನ ರಹಸ್ಯ ಕಂಡುಹಿಡಿಯುವಂತೆ ತಿರುಗುವುದೇ ಹೆತ್ತವರ ಕೆಲಸವಾಗಿತ್ತು. ಆದರೆ ಮಗಳು ಏಕೆ ಆತ್ಮಹತ್ಯೆ ಮಾಡಿಕೊಂಡಳೆಂದು ಕುಟುಂಬಕ್ಕೆ ತಿಳಿದೇ ಇರಲಿಲ್ಲ.

ಪಾಟ್ನಾದ ಸಿಎ ವಿದ್ಯಾರ್ಥಿನಿ ಸರಿತಾ ಸಿಂಗ್ 2015 ಸೆಪ್ಟಂಬರ್ 11ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ನಂತರ ಪೊಲೀಸರಿಗೆ ದೂರು ನೀಡಿದ ಕುಟುಂಬ ಮಗಳ ಆತ್ಮಹತ್ಯೆಗೆ ಕಾರಣ ತಿಳಿಯಲು ಬಯಸಿದ್ದರು. ಪೊಲೀಸರು ತಮ್ಮ ಮಗಳ ಸಾವಿನ ತನಿಖೆ ಸರಿಯಾಗಿ ಮಾಡದೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಕುಟುಂಬ ತಿಳಿದಿತ್ತು. ಸರಿತಾರ ಸಂಬಂಧಿಕರು ಪೊಲೀಸರಿಗೆ ಹೇಳಿರುವ ಪ್ರಕಾರ ಆಕೆಯ ಬಳಿ ಒಂದು ಮೊಬೈಲ್ ಫೋನ್ ಇತ್ತು. ಆದರೆ ಅದನ್ನು ಬಳಸುವುದು ಕುಟುಂಬದವರಿಗೆ ತಿಳಿದಿರಲಿಲ್ಲ. ಫೋನ್ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ ಪೊಲೀಸರು ನಂತರ ಆಕೆಯ ಸಂಭಾಷಣೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿರಲಿಲ್ಲ.

ವರ್ಷದ ಮೇಲೆ ತಿಳಿದ ರಹಸ್ಯ

ಸರಿತಾಳ ತಂದೆ ಆಕಸ್ಮಿಕವಾಗಿ ಮಗಳ ವಾಟ್ಸಪ್ ಚಾಟ್‌ಗಳನ್ನು ನೋಡುವವರೆಗೂ ಸರಿತಾಳ ಸಾವಿಗೆ ಕಾರಣ ತಿಳಿದಿರಲಿಲ್ಲ. ಆದರೆ ಸರಿತಾಳ ತಂದೆ ಫೋನ್ ಹಿಡಿದು ಪೊಲೀಸರ ಬಳಿಗೆ ಹೋದರೂ ಅವರು ಕ್ರಮ ಕೈಗೊಳ್ಳಲಿಲ್ಲ. ಪೊಲೀಸರು ಕ್ರಮ ಕೈಗೊಳ್ಳದಿದ್ದಾಗ ಬಿಹಾರದ ಮುಖ್ಯಮಂತ್ರಿಗೆ ಪತ್ರ ಬರೆದರು.

ಸರಿತಾಳ ಅಂತಿಮ ಸಂಭಾಷಣೆಯಲ್ಲಿ ಆಕೆ ಆಶುತೋಷ್ ಕೃಷ್ಣ ಎನ್ನುವ ವ್ಯಕ್ತಿಯ ಜೊತೆಗೆ ಪ್ರೇಮ ಸಂಬಂಧ ಹೊಂದಿರುವುದು ಪತ್ತೆಯಾಗಿತ್ತು. ಇಬ್ಬರೂ ಗಂಟೆಗಟ್ಟಲೆ ಮಾತನಾಡುತ್ತಿದ್ದರು ಮತ್ತು ಸಂದೇಶಗಳನ್ನು ಪರಸ್ಪರರಿಗೆ ಹಂಚುತ್ತಿದ್ದರು. ಆಕೆಯ ಕೊನೆಯ ಸಂದೇಶದಿಂದ ಪ್ರೇಮ ವೈಫಲ್ಯದಿಂದಲೇ ಸರಿತಾ ಆತ್ಮಹತ್ಯೆ ಮಾಡಿಕೊಂಡದ್ದು ಖಚಿತವಾಗಿತ್ತು. ಆಶುತೋಶ್ ಸರಿತಾಳನ್ನು ಮದುವೆಯಾಗಲು ನಿರಾಕರಿಸಿದ್ದೇ ಆಕೆಯ ಆತ್ಮಹತ್ಯೆಗೆ ಕಾರಣ ಮತ್ತು ಅವರಿಬ್ಬರ ನಡುವೆ ಈ ಬಗ್ಗೆ ವಾಟ್ಸಪ್‌ನಲ್ಲಿ ಗಂಭೀರ ಚರ್ಚೆ ನಡೆದಿತ್ತು. ಅಲ್ಲದೆ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದೂ ಆಶುತೋಶ್‌ಗೆ ಸರಿತಾ ಸಂದೇಶವನ್ನು ಬಿಟ್ಟಿದ್ದಳು.

ಕೃಪೆ:indiatoday.intoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News