ಮಹಾರಾಷ್ಟ್ರ: ಲಂಚ ಆರೋಪದಿಂದ ಬಿಜೆಪಿ ಶಾಸಕ ಖುಲಾಸೆ

Update: 2016-11-08 14:50 GMT

ಥಾಣೆ, ನ.8: ಜಿಲ್ಲೆಯ ಮಿರಾ-ಭಾಯಿಂದರ್ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ನರೇಂದ್ರ ಮೆಹ್ತಾರನ್ನು 14 ವರ್ಷ ಹಳೆಯ ಲಂಚ ಪ್ರಕರಣವೊಂದರಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿದೆ.

2002ರಲ್ಲಿ ಕಾರ್ಪೊರೇಟರ್ ಆಗಿದ್ದ ವೇಳೆ ಮೆಹ್ತಾ, ದೂರುದಾರನೊಬ್ಬನಿಂದ, ರೂ. 20 ಸಾವಿರ ಲಂಚ ಪಡೆದಿದ್ದರೆಂದು ಪ್ರಾಸಿಕ್ಯೂಶನ್ ಆರೋಪಿಸಿತ್ತು. ಆದರೆ, ಅದನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿದೆಯೆಂದು ಅಭಿಪ್ರಾಯಿಸಿದ ಜಿಲ್ಲಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿ.ವಿ.ಬಂಬಾರ್ಡೆ, ಆರೋಪಿಯನ್ನು ದೋಷ ಮುಕ್ತಗೊಳಿಸಿದ್ದಾರೆ.

ಮೆಹ್ತಾ ಇಂದು, 1988ರ ಭ್ರಷ್ಟಾಚಾರ ತಡೆ ಕಾಯ್ದೆಯನ್ವಯದ ಎಲ್ಲ ಆರೋಪಗಳಿಂದ ಖುಲಾಸೆಗೊಂಡಿದ್ದಾರೆ.

ಮಿರಾ-ಭಾಯಿಂದರ್ ನಗರ ಪಾಲಿಕೆಯ ಮೇಯರ್ ಆಗಿರುವ ಮೆಹ್ತಾ, ಶಾಸಕ ಹಾಗೂ ಬಿಜೆಪಿಯ ನಗರ ಘಟಕದ ಅಧ್ಯಕ್ಷರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News