×
Ad

ಗೋವಧೆ: ಇಬ್ಬರಿಗೆ ತಲಾ 5 ವರ್ಷ ಶಿಕ್ಷೆ

Update: 2016-11-08 20:28 IST

ಮುಝಫ್ಫರ್‌ನಗರ, ನ.8: ಶಾಮ್ಲಿ ಜಿಲ್ಲೆಯಲ್ಲಿ 2007ರ ಗೋವಧೆ ಪ್ರಕರಣವೊಂದರಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯವೊಂದು ತಲಾ 5 ವರ್ಷಗಳ ಶಿಕ್ಷೆ ವಿಧಿಸಿದೆ.

ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಮನೋಜ್ ಕುಮಾರ್ ನಿನ್ನೆ ಇಸ್ರೇಲ್ ಹಾಗೂ ಮೋನು ಎಂಬವರಿಗೆ ಈ ಶಿಕ್ಷೆ ವಿಧಿಸಿದ್ದು, ತಲಾ ರೂ. 1 ಸಾವಿರ ದಂಡ ಪಾವತಿಸುವಂತೆಯೂ ಆದೇಶಿಸಿದ್ದಾರೆ.

2007ರ ಆ.20ರಂದು ದಾಳಿಯೊಂದರ ವೇಳೆ ಇಸ್ರೇಲ್ ಹಾಗೂ ಮೋನುವನ್ನು ಬಂಧಿಸಿದ್ದ ಪೊಲೀಸರು, ಅಝೀಝ್‌ಪುರದ ಅವರ ಮನೆಯಿಂದ ಗೋಮಾಂಸ ವಶಪಡಿಸಿಕೊಂಡಿದ್ದರೆಂದು ಸರಕಾರಿ ವಕೀಲ ಜಾವೇದ್ ಅಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News