×
Ad

500,1000 ನೋಟುಗಳ ಚಲಾವಣೆ ಬಂದ್: ಪ್ರಧಾನಿ ಘೋಷಣೆ

Update: 2016-11-08 20:38 IST

ಹೊಸದಿಲ್ಲಿ, ನ.8: ಅತ್ಯಂತ ಆಶ್ಚರ್ಯದ ಬೆಳವಣಿಗೆಯೊಂದರಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ 500 ರೂ ಹಾಗು 1,000 ರೂ ನೋಟುಗಳ ಚಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಥಗಿತಗೊಳಿಸಿದ್ದಾರೆ.ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದ್ದಾರೆ. 

ಇದರ ಬದಲಿಗೆ 500 ರೂ ಹಾಗು 2,000 ರೂ ಗಳ ಹೊಸ ನೋಟನ್ನು ಸರಕಾರ ಬಿಡುಗಡೆ ಮಾಡಲಿದೆ. 50 ದಿನಗಳೊಳಗೆ ಅಂದರೆ ಡಿಸೇಂಬರ್ 30 ರೊಳಗೆ ತಮ್ಮ ಬಳಿ ಇರುವ 500 ರೂ ಹಾಗು 1,000 ರೂ ನೋಟುಗಳನ್ನು ಜನರು ಬ್ಯಾಂಕ್ ಗಳಿಗೆ ಅಥವಾ ಅಂಚೆ ಕಚೇರಿಗಳಿಗೆ ಸಲ್ಲಿಸಲು ಅವಕಾಶವಿದೆ.

ಈ ಐವತ್ತು ದಿನಗಳ ಅವಧಿಯಲ್ಲಿ ಎಟಿಎಂಗಳಲ್ಲಿ ಆರಂಭಿಕ ಹಣ ತೆಗೆಯುವ ಮಿತಿ 2000 ರೂ. ಆಗಿರಲಿದೆ.  ನವೆಂಬರ್ 9 ಹಾಗು 10 ರಂದು ಎಟಿಎಂ ಗಳು ದೇಶಾದ್ಯಂತ ಕೆಲಸ ಮಾಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. 

ಮಂಗಳವಾರದಿಂದ 72 ಗಂಟೆಗಳ ಕಾಲ ಅಂದರೆ 3 ದಿನಗಳ ಕಾಲ ಸರಕಾರಿ ಆಸ್ಪತ್ರೆಗಳು 500 ಹಾಗು  1000 ರೂ  ನೋಟುಗಳನ್ನು ಸ್ವೀಕರಿಸಲಿವೆ. 
ಪೆಟ್ರೋಲ್ ಪಂಪ್ ಹಾಗು ರಿಟೇಲ್ ಮಳಿಗೆಗಳು ನವೆಂಬರ್ 11 ರವರೆಗೆ  500 ಹಾಗು  1,000 ರೂ.ಗಳಲ್ಲಿ ಮಾಡಿದ ಪ್ರತಿಯೊಂದು ನಗದು ವ್ಯವಹಾರದ ವಿವರಗಳನ್ನು ಇಟ್ಟುಕೊಳ್ಳಬೇಕಿದೆ. 

ರುದ್ರಭೂಮಿಗಳೂ 500 ಹಾಗು 1,000 ರೂ ನೋಟುಗಳನ್ನು ಈ ಅವಧಿಯಲ್ಲಿ ಸ್ವೀಕರಿಸಲು ಸೂಚಿಸಲಾಗಿದೆ.  ಚೆಕ್, ಡಿಡಿ, ಕ್ರೆಡಿಟ್ ಕಾರ್ಡ್ ಹಾಗು ಡೆಬಿಟ್ ಕಾರ್ಡ್ ಮೂಲಕ ಮಾಡುವ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 

ಡಿಸೇಂಬರ್ 30 ರೊಳಗೆ 500 ಹಾಗು  1,000 ರೂ ನೋಟುಗಳನ್ನು ಬದಲಾಯಿಸಲು ಸಾಧ್ಯವಾಗದವರು ಗುರುತು ಚೀಟಿ ತೋರಿಸಿ ಮಾರ್ಚ್ 31, 2017 ರೊಳಗೆ ಬದಲಾಯಿಸಿಕೊಳ್ಳಬಹುದು. 


 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News