ಪಶ್ಚಿಮ ಬಂಗಾಳ: ಸ್ಫೋಟಕ್ಕೆ ವೃದ್ಧ ಬಲಿ : ಮೂವರು ಶಂಕಿತರ ಬಂಧನ
Update: 2016-11-08 22:27 IST
ಕೋಲ್ಕತಾ, ನ.8: ಪಶ್ವಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಖಟ್ಟಾದಲ್ಲಿ ಸೋಮವಾರ ಒಬ್ಬನ ಸಾವಿಗೆ ಕಾರಣವಾದ ಭಾರೀ ತೀವ್ರತೆಯ ಸ್ಫೋಟವೊಂದರ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಸ್ಫೋಟಗಳನ್ನು ಶೇಖರಿಸಿಡಲಾಗಿದ್ದ ಸ್ಫೋಟಕ ಸಿಡಿದು, 70ರ ಹರೆಯದ ಲಾಲು ಶೇಕ್ ಎಂಬಾತ ಸಾವಿಗೀಡಾಗಿದ್ದನು. ಕ್ಲಬ್‌ನ ಮಾಡು ಧ್ವಂಸಗೊಂಡಿತ್ತು. ಸ್ಫೋಟದಿಂದ ಕಾಂಕ್ರೀಟ್ ಕಟ್ಟಡ ಕುಸಿದು ಹೋಗಿತ್ತು. ರಾಷ್ಟ್ರೀಯ ತನಿಖೆ ಸಂಸ್ಥೆಯು (ಎನ್‌ಐಎ) ಪ್ರಾಥಮಿಕ ತನಿಖೆ ಆರಂಭಿಸಿದ್ದು. ಸ್ಫೋಟಕ್ಕೆ ಭಯೋತ್ಪಾದಕ ಸಂಪರ್ಕವೃನಾದರೂ ಇದೆಯೇ ಎಂದು ಪರಿಶೀಲಿಸುತ್ತಿದೆ. ರಾಜ್ಯದ ಅಪರಾಧ ತನಿಖೆ ಇಲಾಖೆ (ಸಿಐಡಿ) ಪ್ರಕರಣದ ತನಿಖೆ ನಡೆಸುತ್ತಿದೆ.
ಸ್ಫೋಟದ ಸ್ಥಳವು 2014ರ ಅಕ್ಟೊಬರ್‌ನಲ್ಲಿ ಸ್ಫೋಟ ನಡೆದಿದ್ದ ಬುರ್ದ್ವಾನ್ ಜಿಲ್ಲೆಯ ಖಗ್ರಾಗಡದಿಂದ ತುಂಬ ದೂರವೇನೂ ಇಲ್ಲ. ಅದರಿಂದಾಗಿ ಎಲ್ಲ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಅಂದಿನ ಘಟನೆಯಲ್ಲಿ ಬಾಂಬ್ ತಯಾರಿಸುವ ವೇಳೆ ಇಬ್ಬರು ಶಂಕಿತ ಭಯೋತ್ಪಾದಕರು ಸತ್ತಿದ್ದರು.