×
Ad

ಅತ್ಯಾಚಾರ ಪ್ರಕರಣದಲ್ಲಿ ಅಸಾಂಜ್ ವಿಚಾರಣೆ: ಸ್ವೀಡನ್

Update: 2016-11-09 00:41 IST

ಅಸಾಂಜ್ ವಿಚಸ್ಟಾಕ್‌ಹೋಮ್, ನ. 8: ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ಮುಂದಿನ ವಾರ ಎದುರೆದುರು ಪ್ರಶ್ನಿಸಲಾಗುವುದು ಎಂದು ಸ್ವೀಡನ್‌ನ ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿ ಸೋಮವಾರ ಪ್ರಕಟಿಸಿದೆ.
ಅಸಾಂಜ್ 2012ರಿಂದ ಆಶ್ರಯ ಪಡೆದಿರುವ ಲಂಡನ್‌ನಲ್ಲಿರುವ ಇಕ್ವೆಡಾರ್ ದೇಶದ ರಾಯಭಾರ ಕಚೇರಿಯಲ್ಲಿ ಇಕ್ವೆಡಾರ್‌ನ ಪ್ರಾಸಿಕ್ಯೂಟರ್ ಒಬ್ಬರು ಭೇಟಿಯಾಗುತ್ತಾರೆ ಎಂದಿದೆ.
‘‘ಕ್ರಿಮಿನಲ್ ವಿಷಯಗಳಲ್ಲಿ ಕಾನೂನು ನೆರವು ನೀಡಬೇಕೆನ್ನುವ ಸ್ವೀಡನ್‌ನ ಮನವಿಗೆ ಇಕ್ವೆಡಾರ್ ಒಪ್ಪಿದೆ. ಇಕ್ವೆಡಾರ್‌ನ ಪ್ರಾಸಿಕ್ಯೂಟರ್ ಒಬ್ಬರು ವಿಚಾರಣೆ ನಡೆಸಲಿದ್ದಾರೆ’’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News