×
Ad

'ಬೀಸ್ಟ್‌'ಗೆ ಸವಾರಿ ಮಾಡುವವರು ಯಾರು?

Update: 2016-11-09 15:01 IST

ಮುಂದಿನ ಅಮೆರಿಕದ ಮುಂದಿನ ಅಧ್ಯಕ್ಷರ ಅತೀ ಸಣ್ಣ ಆಸ್ತಿಯೇ ಆಗಿರಬಹುದು. ಆದರೆ ವರದಿಗಳ ಪ್ರಕಾರ ಹೊಸ ಕಮಾಂಡರ್ ಇನ್ ಚೀಪ್ ಹೊಸ ಸ್ಟೇಟ್ ಕಾರ್ ದ ಬೀಸ್ಟ್‌ನಲ್ಲಿ ಸುತ್ತಾಡಲಿದ್ದಾರೆ. ಮುಂದಿನ ಜನವರಿಯಲ್ಲಿ ಇದು ಕಾರ್ಯಾರಂಭಿಸಲಿದೆ.

ಜನರಲ್ ಮೋಟಾರ್ಸ್‌ ಬಾಗಶಃ ಮುಂದಿನ ಅಧ್ಯಕ್ಷರ ವಾಹನವನ್ನು ಸಿದ್ಧಪಡಿಸಲಿದೆ. ಇದಕ್ಕಾಗಿ ವಾಹನ ಅಭಿವೃದ್ಧಿಪಡಿಸಲು ಜನರಲ್ ಮೋಟಾರ್ಸ್‌ಗೆ 15 ಮಿಲಿಯನ್ ಡಾಲರ್‌ಗಳನ್ನು ತೆರಲಾಗಿದೆ. ಅಧ್ಯಕ್ಷರ ರಕ್ಷಣೆಗಾಗಿ ಎಂದೇ ಜಾಗತಿಕವಾಗಿ ಶ್ವೇತ ಭವನದ ಬಳಿ 12 ವಾಹನಗಳಿವೆ. ಇದರ ಒಟ್ಟು ಮೌಲ್ಯ 1.5 ಮಿಲಿಯನ್ ಡಾಲರ್.

ಈಗ ಬರಾಕ್ ಒಬಾಮ ಅವರು ಓಡಿಸುವ ಗಾಡಿ 8 ಟನ್‌ಗಳಷ್ಟು ತೂಕವಿದೆ. ಫ್ರೇಮಿನಲ್ಲಿ ದೊಡ್ಡ ಪ್ರಮಾಣದ ಕವಚಗಳನ್ನು ಫ್ರೇಮಿನಲ್ಲಿರಿಸಲಾಗಿದೆ. ಈ ಬಾಗಿಲುಗಳು 8 ಇಂಚು ದಪ್ಪವಿದ್ದು, ಪ್ರತಿಯೊಂದೂ ಬೋಯಿಂಗ್ 747 ಜೆಟ್ ನ ಬಾಗಿಲಿನಷ್ಟೇ ತೂಕವಿದೆ. ಹೀಗೆ ಅಧ್ಯಕ್ಷರನ್ನು ಯಾವುದೇ ರಸಾಯನಿಕ ಅಥವಾ ಜೈವಿಕ ದಾಳಿಯಿಂದ ರಕ್ಷಿಸುತ್ತದೆ.

ಕಾರಿನೊಳಗೆ ಆಮ್ಲಜನಕ ಸರಬರಾಜು ಮಾಡುವ ವ್ಯವಸ್ಥೆಯೂ ಇದೆ. ಎಲ್ಲಾ ಕಿಟಕಿಗಳೂ ಪೂರ್ಣವಾಗಿ ಸೀಲ್ ಆಗಿದೆ ಮತ್ತು ಚಾಲಕನ ಬದಿಯಲ್ಲಿ ಹೊರತುಪಡಿಸಿ ಒಳಗೆ ತೂರಲು ಸಾಧ್ಯವಿಲ್ಲ. ಇವುಗಳು ಆರ್ಮರ್ ಪಿಯರ್ಸಿಂಗ್ ಬುಲೆಟ್‌ಗಳು ಮತ್ತು ಸ್ಫೋಟವನ್ನೂ ತಡೆಯಬಲ್ಲವು. ಟೈರ್‌ಗಳನ್ನು ಕೇಲ್ವರ್‌ನಲ್ಲಿ ಕೋಟ್ ಮಾಡಲಾಗಿದ್ದು, ಒಡೆದು ಹೋಗದೆ ಇರುವಂತೆ ರಕ್ಷಣೆಯಿದೆ. ಲೋಹದ ರಿಮ್‌ಗಳು ವಾಹನವನ್ನು ಹಿಡಿದಿಡುವಷ್ಟು ಶಕ್ತವಾಗಿವೆ ಮತ್ತು ಹೊರಗಿನ ಭಾಗ ಸ್ಫೋಟಗೊಂಡಲ್ಲಿಯೂ ಮುಂದಕ್ಕೆ ಸಾಗುವ ವ್ಯವಸ್ಥೆಯಿದೆ.

ಕಾರಿಗೆ ಒಟ್ಟು ಪ್ರತಿ ಗಂಟೆಗೆ 60 ಕಿಮೀ ವೇಗವಿದೆ. ಯಾವುದೇ ಸ್ಥಿತಿಂುಲ್ಲೂ ಈ ವೇಗದಲ್ಲಿ ಚಲಿಸುತ್ತದೆ.

ವಾಹನದಲ್ಲಿ ನೈಟ್ ವಿಶನ್ ಕ್ಯಾಮರಾಗಳು, ಜಿಪಿಎಸ್ ಟ್ರಾಕಿಂಗ್, ಗನ್‌ಗಳು, ಟಿಯರ್ ಗ್ಯಾಸ್ ಶೆಲ್‌ಗಳು ಮತ್ತು ಉಪಗ್ರಹ ಸಂಪರ್ಕ ವ್ಯವಸ್ಥೆ ಇದೆ. ರಸ್ತೆಯಲ್ಲೇ ತುರ್ತು ಟ್ರಾನ್ಸಫ್ಯೂಷನ್ ಅಗತ್ಯವಿದ್ದಲ್ಲಿ ಅಧ್ಯಕ್ಷರ ರಕ್ತದ ಮಾದರಿಯ ಎರಡು ಬಾಟಲಿಗಳು ಇವೆ.

ಎಲ್ಲಾ ಆರ್ಮರ್ ಪ್ಲೇಟಿಂಗ್ ಮತ್ತು ಪರಿಸರ ಪ್ರತ್ಯೇಕತೆ ಇರುವ ಕಾರಣ ಕ್ಯಾಬಿನ್ ಒಳಗೆ ಹೊರಗಿನ ಶಬ್ದ ಕೇಳಿಸುವುದಿಲ್ಲ. ಹೊರಗಿನ ಧ್ವನಿ ಕೇಳಿಸಲು ಮೈಕ್ರೋಫೋನ್‌ಗಳನ್ನು ಹೊರಗೆ ಮತ್ತು ಒಳಗೆ ಸ್ಪೀಕರ್ ಇಡಲಾಗಿದೆ. ಮುಂದುವರಿದು ಸಂಪರ್ಕ ಸಾಧನಗಳೂ ಇವೆ. ಅಮೆರಿಕ ಅಧ್ಯಕ್ಷರ ಜೊತೆಗೆ ಹೋಗುವ 45 ವಾಹನಗಳಲ್ಲಿ ಮತ್ತು ವಿದೇಶಕ್ಕೆ ಹೋಗುವಾಗ ಜೊತೆಗಿರುವ ವಾನಗಳಲ್ಲಿ ಬೀಸ್ಟ್ ಕೂಡ ಸೇರಲಿದೆ.

ಕೃಪೆ:economictimes.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News