ತಮಿಳ್ನಾಡಿನ ಅಮ್ಮ ಕೆಲವೇ ದಿವಸಗಳೊಳಗೆ ಆಸ್ಪತ್ರೆಯಿಂದ ಮನೆಗೆ
Update: 2016-11-09 17:00 IST
ಚೆನ್ನೈ, ನ. 9: ಚೆನ್ನೈ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ತಮಿಳ್ನಾಡು ಮುಖ್ಯಮಂತ್ರಿ ಜಯಜಲಿತಾ ರೋಗದಿಂದ ಗುಣಮುಖರಾಗಿದ್ದು, ಸಿಂಗಾಪುರದಿಂದ ಬಂದ ಫಿಸಿಯೊ ತೆರೆಪಿಸ್ಟ್‌ಗಳ ಉಪಚಾರದಲ್ಲಿದ್ದು, ಅವರು ಇನ್ನು ಕೆಲವೇ ದಿವಸಗಳಲ್ಲಿ ಮನೆಗೆ ಮರಳಿ ಬರಲಿದ್ದಾರೆಂದು ಎಐಎಡಿಎಂಕೆ ತಿಳಿಸಿದೆ ಎಂದು ವರದಿಯಾಗಿದೆ.
ಅಮ್ಮ ಆರೋಗ್ಯದಿಂದಿದ್ದಾರೆ. ಆಹಾರ ಸೇವಿಸುತ್ತಿದ್ದಾರೆ ಎಂದು ಎಐಎಡಿಎಂಕೆ ನಾಯಕ ಪೊನ್ನಪ್ಪನ್ ಹೇಳಿದ್ದಾರೆ. ಪ್ರಮುಖ ವ್ಯಕ್ತಿಗಳಲ್ಲಿ ಪ್ರಧಾನ ವಿಷಯಗಳ ಕುರಿತು ಜಯಲಲಿತಾ ಇಲೆಕ್ಟ್ರಾನಿಕ್ ಉಪಕರಣಗಳ ಸಹಾಯದಲ್ಲಿ ಮಾತಾಡಿದ್ದಾರೆಂದು ಅವರು ತಿಳಿಸಿದ್ದಾರೆ. ಜಯಲಲಿತಾರಿಗೆ ಚಿಕಿತ್ಸೆ ನೀಡಿದ ಅಪೊಲೊ ಆಸ್ಪತ್ರೆ, ಲಂಡನ್, ದಿಲ್ಲಿ ಏಮ್ಸ್‌ನ ವೈದ್ಯರಿಗೂ ಅವರು ಕೃತಜ್ಞತೆ ಸೂಚಿಸಿದ್ದಾರೆ. ದೇಹದಲ್ಲಿ ನೀರಿನಂಶ ಕೊರತೆ ಸಮಸ್ಯೆಯಿಂದ ಸೆಪ್ಟಂಬರ್ 22ಕ್ಕೆ ಜಯಲಲಿತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿ ತಿಳಿಸಿದೆ.