ಬೀಫ್ ಮನೆಯಲ್ಲಿಟ್ಟುಕೊಂಡಿದ್ದಕ್ಕೆ 5ವರ್ಷ ಜೈಲು ಶಿಕ್ಷೆ!
Update: 2016-11-09 17:02 IST
ಮುಝಫ್ಫರ್ ನಗರ್, ನವೆಂಬರ್ 9: ದನದ ಮಾಂಸ ಮನೆಯಲ್ಲಿಟ್ಟುಕೊಂಡಿದ್ದರೆನ್ನಲಾದ ಇಬ್ಬರಿಗೆ ಉತ್ತರಪ್ರದೇಶದ ಅಡಿಷನಲ್ ಸೆಶನ್ಸ್ ನ್ಯಾಯಾಲಯವೊಂದು ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ.2007 ಆಗಸ್ಟ್ 20ಕ್ಕೆ ಶಂಲಿ ಜಿಲ್ಲೆಯ ಅಝೀರ್ಪುರ್ ಗ್ರಾಮದಲ್ಲಿ ಇವರಿಬ್ಬರ ಮನೆಗೆ ಪೊಲೀಸರು ದಾಳಿ ನಡೆಸಿದ ವೇಳೆ ದನದ ಮಾಂಸಪತ್ತೆಯಾಗಿತ್ತು. ಜೈಲುಶಿಕ್ಷೆ ಜೊತೆಗೆ ಒಂದು ಸಾವಿರ ರೂಪಾಯಿ ದಂಡವನ್ನೂ ಕೋರ್ಟು ವಿಧಿಸಿದೆಎಂದು ವರದಿ ತಿಳಿಸಿದೆ.