×
Ad

ಹಳೆ ನೋಟು ಬದಲಾಯಿಸಲು ಕೇಂದ್ರ ವಿಶೇಷ ಶಿಬಿರ ಆಯೋಜಿಸಲಿ: ಅಖಿಲೇಶ್ ಯಾದವ್

Update: 2016-11-09 17:35 IST

ಲಕ್ನೊ,ನ. 9: ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ 500,1000ರೂಪಾಯಿ ನೋಟುಗಳ ಚಲಾವಣೆ ಸ್ಥಗಿತಗೊಳಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ್ದು, ಕೇಂದ್ರಸರಕಾರ ಈ ನೋಟುಗಳನ್ನು ಸ್ಥಗಿತ ಗೊಳಿಸುವುದರಿಂದ ಗ್ರಾಮಸ್ಥರು, ಬಡವರು, ರೈತರಿಗೆಲ್ಲ ಯಾವುದೇ ರೀತಿಯ ಅನಾನುಕೂಲ ಆಗದಂತೆ ವಿಶೇಷ ಗಮನ ಹರಿಸಬೇಕೆಂದು ಹೇಳಿದ್ದಾರೆಂದು ವರದಿಯಾಗಿದೆ. ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲಿ ನೋಟುಗಳ ಬದಲಾವಣೆಗಾಗಿ ವಿಶೇಷ ಶಿಬಿರಗಳನ್ನು ಆಯೋಜಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.

ಹಳೆ ನೋಟು ಬದಲಾಯಿಸುವ ವಿಶೇಷ ವ್ಯವಸ್ಥೆ ಮಾಡಬೇಕು

ಕೇಂದ್ರ ಸರಕಾರದ ಈ ನಿರ್ಧಾರದಿಂದ ಸಾಮಾನ್ಯ ನಾಗರಿಕರು ಮತ್ತು ವ್ಯಾಪಾರಿಗಳಿಗೆ ನೋಟು ಬದಲಾಯಿಸಿಕೊಳ್ಳಲು ಯಾವುದೇ ಕಷ್ಟವಿರಬಾರದು. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳ ಸಂಖ್ಯೆ ಕಡಿಮೆ ಇರುವುದರಿಂದ ಕೇಂದ್ರ ಸರಕಾರ ಈ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನು ಏರ್ಪಡಿಸಿ ಹಳೆ ನೋಟು ಬದಲಾಯಿಸಲು ಸೌಲಭ್ಯ ವೊದಗಿಸಬೇಕೆಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆಂದುಉತ್ತರ ಪ್ರದೇಶ ಸರಕಾರದ ವಕ್ತಾರರು ತಿಳಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News