ಎನ್‌ಜಿಒ ಖಾತೆ ಸ್ತಂಭನ: ಗುಜರಾತ್ ಸರಕಾರದಿಂದ ವಿವರಣೆ ಕೇಳಿದ ಸುಪ್ರೀಂಕೋರ್ಟ್
ಹೊಸದಿಲ್ಲಿ,ನ. 10: ಎನ್‌ಜಿಒಗಳ ಖಾತೆಗಳಿಗೆ ದಿಗ್ಬಂಧ ವಿಧಿಸಿದ ಅಹ್ಮದಾಬಾದ್ ಪೊಲೀಸರ ಕ್ರಮವನ್ನುಪ್ರಶ್ನಿಸಿ ಮಾನವ ಹಕ್ಕು ಕಾರ್ಯಕರ್ತೆ ಟೀಸ್ಟ ಸೆಟಲ್ವಾಡ್ ಸಲ್ಲಿಸಿದ ಅರ್ಜಿಯಲ್ಲಿ ಸುಪ್ರೀಂಕೋರ್ಟು ಗುಜರಾತ್ ಸರಕಾರದಿಂದ ವಿವರಣೆ ಕೇಳಿದೆ ಎಂದು ವರದಿಯಾಗಿದೆ.
ಈ ತಿಂಗಳು 16ರೊಳಗೆ ಉತ್ತರ ನೀಡಬೇಕು ಎಂದು ಜಸ್ಟಿಸ್ ದೀಪಕ್ ಮಿಶ್ರ, ಜಸ್ಟಿಸ್ ಅಮಿತಾಭ್ ರಾಯ್‌ರ ಸುಪ್ರೀಂಕೊರ್ಟು ಪೀಠ ಗುಜರಾತ್ ಸರಕಾರಕ್ಕೆ ಸೂಚಿಸಿದೆ. ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಕೋರ್ಟು ಡಿಸೆಂಬರ್ ಒಂದಕ್ಕೆ ತೀರ್ಪು ನೀಡಲಿದೆ.
ಕಳೆದ ಮೂರು ತಿಂಗಳಿಂದ ನಮ್ಮ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ನೋಟಿಸ್ ನೀಡಿಯೂ ಮೂರು ಬಾರಿ ಗುಜರಾತ್ ಸರಕಾರ ಈ ವಿಷಯವನ್ನು ಮುಂದೂಡುತ್ತ ಬಂದಿದೆ. ಟೀಸ್ಟಾರ ಸಬ್ರಂಗ್ ಟ್ರಸ್ಟ್ ಮತ್ತು ಸಿಟಿಝನ್ ಫಾರ್ ಜಸ್ಟಿಸ್ ಎಂಬ ಎನ್‌ಜಿಒಗಳ ಖಾತೆಗೆ ದಿಗ್ಬಂಧನ ವಿಧಿಸಲಾಗಿದೆ. ಇದನ್ನು ತೆರವು ಗೊಳಿಸಬೇಕೆಂದು ಆಗ್ರಹಿಸಿ ಗುಜರಾತ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತಾದರೂ ಹೈಕೋರ್ಟು ಅರ್ಜಿಯನ್ನು ವಿಚಾರಣೆಗೆತ್ತಿಕೊಳ್ಳದೆ ತಿರಸ್ಕರಿಸಿತ್ತು ಎಂದು ವರದಿ ತಿಳಿಸಿದೆ.