ಮೂಡುಬಿದಿರೆ: ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಶಿಲಾನ್ಯಾಸ

Update: 2016-11-10 18:45 GMT

ಮೂಡುಬಿದಿರೆ, ನ.10: ಮೂಡುಬಿದಿರೆ-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಮೂಡುಬಿದಿರೆ ಮೆಸ್ಕಾಂ ಕಚೇರಿಯಿಂದ ಗಂಟಾಲ್‌ಕಟ್ಟೆಯವರೆಗಿನ ಹೆದ್ದಾರಿಯನ್ನು 4.07 ಕೋ. ರೂ. ವೆಚ್ಚದಲ್ಲಿ ವಿಸ್ತರಿಸಿ, ಅಭಿವೃದ್ಧಿಗೊಳಿಸುವ ಕಾಮಗಾರಿಗೆ ಶಾಸಕ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಗುರುವಾರ ಸಂಜೆ ಶಿಲಾನ್ಯಾಸ ನೆರವೇರಿಸಿದರು.
   
    ನಂತರ ಮಾತನಾಡಿದ ಅವರು ಮೂರು ಕಾವೇರಿ ಮೂಲ್ಕಿ ಕಾರ್ನಾಡು ಪೇಟೆಯವರೆಗಿನ ರಸ್ತೆಯನ್ನು 10 ಕೋ. ರೂ. ವೆಚ್ಚದಲ್ಲಿ ಕುಪ್ಪೆಪದವು ಇರುವೈಲು-ಮೂಡುಬಿದಿರೆ ರಸ್ತೆಯನ್ನು 9 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಹಾಗೂ ಕ್ಷೇತ್ರ ವ್ಯಾಪ್ತಿಯ ಹಲವು ರಸ್ತೆಗಳ ಅಭಿವೃದ್ಧಿಗೆ 50 ಕೋ. ವೆಚ್ಚದಲ್ಲಿ ರಸ್ತೆ ಗಳನ್ನು ಅಭಿವೃದ್ಧಿಪಡಿಸಲಾಗುವುದು. ಶ್ರವಣಬೆಳಗೋಳ ಮಹಾಮಸ್ತಕಾ ಭಿಷೇಕ ವಿಶೇಷ ಅನುದಾನದ ಮೂಲಕ ಮಹಾವೀರ ಕಾಲೇಜು ರಸ್ತೆ ಯನ್ನು 10 ಮೀ. ಅಗಲ ಗೊಳಿಸಿ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾದ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರೇಮನಾಥ್ ಮಾರ್ಲ, ಪುರಸಭಾ ಸದಸ್ಯ ರತ್ನಾಕರ ದೇವಾಡಿಗ, ಸುಪ್ರಿಯಾ ಡಿ. ಶೆಟ್ಟಿ, ರಾಜೇಶ್ ಕೋಟೆಗಾರ್, ಮೂಡಾ ಸದಸ್ಯ ಸುರೇಶ್ ಪ್ರಭು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ರವಿಕುಮಾರ್, ರಾಘವೇಂದ್ರ ಮತ್ತಿತರರು ಈ ಸಂದ ಭರ್ದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News