×
Ad

ವಲಸೆ ವ್ಯವಸ್ಥೆ ಮರುಪರಿಶೀಲನೆಗೆ ಟ್ರಂಪ್ ಆಡಳಿತ ಒತ್ತು

Update: 2016-11-12 00:22 IST

ವಾಶಿಂಗ್ಟನ್, ನ. 11: ಅಮೆರಿಕ ವಲಸೆ ವ್ಯವಸ್ಥೆಯ ‘ಪ್ರಾಮಾಣಿಕತೆಯನ್ನು ಮರಳಿ ತರಲು’ ಟ್ರಂಪ್ ಆಡಳಿತವು 10 ಅಂಶಗಳ ಯೋಜನೆಯೊಂದನ್ನು ಜಾರಿಗೊಳಿಸುವುದು ಎಂದು ನಿಯೋಜಿತ ಅಧ್ಯಕ್ಷರ ಅಧಿಕಾರ ಸ್ವೀಕಾರ ತಂಡ ಶುಕ್ರವಾರ ಹೇಳಿದೆ.

ಮೆಕ್ಸಿಕೊದೊಂದಿಗಿನ ಗಡಿಯ ಉದ್ದಕ್ಕೂ ಗೋಡೆ ಕಟ್ಟುವುದು, ಕೆಲವು ನಿರ್ದಿಷ್ಟ ದೇಶಗಳ ವೀಸಾಗಳನ್ನು ಅಮಾನತುಗೊಳಿಸುವುದು ಹಾಗೂ ಕಾನೂನುಬದ್ಧ ವಲಸೆ ವ್ಯವಸ್ಥೆಗೆ ಸುಧಾರಣೆ ತರುವುದು ಯೋಜನೆಯಲ್ಲಿ ಸೇರಿದೆ.

ರಾಷ್ಟ್ರೀಯ ರಕ್ಷಣೆ ಮತ್ತು ಸುರಕ್ಷತೆ ಕ್ಷೇತ್ರದಲ್ಲಿ ಮೂರು ಬೆದರಿಕೆಗಳನ್ನು ಟ್ರಂಪ್ ತಂಡ ಗುರುತಿಸಿದೆ. ಅವುಗಳೆಂದರೆ, ತೀವ್ರವಾದಿ ಸಿದ್ಧಾಂತಗಳು, ಪರಮಾಣು ಶಸ್ತ್ರಗಳು ಮತ್ತು ಸೈಬರ್ ದಾಳಿಗಳು. ಈ ಮೂರು ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡಲು ಟ್ರಂಪ್ ಆಡಳಿತ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News