ಮೆಕ್ಸಿಕೊದ ಅಕ್ರಮ ವಲಸಿಗರ ಸಂಖ್ಯೆಯಲ್ಲಿ ಹೆಚ್ಚಳ
Update: 2016-11-12 00:23 IST
ವಾಶಿಂಗ್ಟನ್, ನ. 11: ಮೆಕ್ಸಿಕೊದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವ ವಲಸಿಗರ ಸಂಖ್ಯೆ ಅಕ್ಟೋಬರ್ ತಿಂಗಳಲ್ಲಿ 16 ಶೇಕಡಕ್ಕಿಂತಲೂ ಅಧಿಕ ಹೆಚ್ಚಳವನ್ನು ಕಂಡಿದೆ ಎಂದು ಅಮೆರಿಕದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ತಾನು 46,195 ಮಂದಿಯನ್ನು ಬಂಧಿಸಿರುವುದಾಗಿ ಅಮೆರಿಕದ ಗೃಹ ಇಲಾಖೆ ತಿಳಿಸಿದೆ. ಇದು ಸೆಪ್ಟಂಬರ್ ಮತ್ತು ಆಗಸ್ಟ್ ತಿಂಗಳುಗಳ ಸಂಖ್ಯೆಯಾದ ಕ್ರಮವಾಗಿ 39,501 ಮತ್ತು 37,048ಕ್ಕಿಂತ ಅಧಿಕವಾಗಿದೆ.
‘‘ನಮ್ಮ ವಲಸಿಗ ಬಂಧನ ಕೇಂದ್ರಗಳಲ್ಲಿ ಈಗ ಸುಮಾರು 41,000 ಮಂದಿಯಿದ್ದಾರೆ. ಸಾಮಾನ್ಯವಾಗಿ ಈ ಕೇಂದ್ರಗಳಲ್ಲಿ ಇರುವವರ ಸಂಖ್ಯೆ 31,000 ಮತ್ತು 34,000ದ ನಡುವೆ ಇರುತ್ತದೆ’’ ಎಂದು ಗೃಹ ಇಲಾಖೆ ಕಾರ್ಯದರ್ಶಿ ಜೆಹ್ ಜಾನ್ಸನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.