×
Ad

ಕ್ಯಾಲಿಫೋರ್ನಿಯ: ಮುಸ್ಲಿಮ್ ವಿದ್ಯಾರ್ಥಿನಿಯರ ಮೇಲೆ ದಾಳಿ

Update: 2016-11-12 00:24 IST

ಲಾಸ್ ಏಂಜಲಿಸ್, ನ. 11: ಮುಸ್ಲಿಮ್ ವಿದ್ಯಾರ್ಥಿನಿಯರ ವಿರುದ್ಧ ನಡೆದ ದಾಳಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಕ್ಯಾಲಿಫೋರ್ನಿಯದ ಎರಡು ವಿಶ್ವವಿದ್ಯಾನಿಲಯಗಳ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯ ಗಳಿಸಿದ ಒಂದು ದಿನದ ಬಳಿಕ, ಅಂದರೆ ಬುಧವಾರ ಈ ಎರಡೂ ದಾಳಿಗಳು ನಡೆದಿವೆ.

ಸ್ಯಾನ್‌ಡೀಗೊ ವಿಶ್ವವಿದ್ಯಾನಿಲಯದಲ್ಲಿ ನಡೆದ ಮೊದಲ ಘಟನೆಯಲ್ಲಿ, ಇಬ್ಬರು ದುಷ್ಕರ್ಮಿಗಳು ‘‘ನಿಯೋಜಿತ ಅಧ್ಯಕ್ಷ ಟ್ರಂಪ್ ಮತ್ತು ಮುಸ್ಲಿಮ್ ಸಮುದಾಯದ ಬಗ್ಗೆ ಮಾತನಾಡಿದರು’’ ಎಂದು ಕ್ಯಾಂಪಸ್ ಪೊಲೀಸರು ಹೇಳಿದರು. ದುಷ್ಕರ್ಮಿಗಳು ವಿದ್ಯಾರ್ಥಿನಿಯ ಪರ್ಸ್, ಚೀಲ ಮತ್ತು ಕೀಗಳನ್ನು ಕಸಿದುಕೊಂಡು ಓಡಿದರು.

ಸ್ಯಾನ್‌ಜೋಸ್ ವಿವಿಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ, ದುಷ್ಕರ್ಮಿಯೊಬ್ಬ ವಿದ್ಯಾರ್ಥಿನಿಯೊಬ್ಬರ ಶಿರವಸ್ತ್ರವನ್ನು ಎಳೆದನು ಹಾಗೂ ಆಕೆಯನ್ನು ಕೆಳಗೆ ದೂಡಿ ಹಾಕಿದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News