×
Ad

ಸದ್ಯಕ್ಕೆ 2000 ರೂ. ನೋಟು ಸೆಲ್ಫಿಗೆ ಬಿಟ್ಟು ಬೇರೆ ಯಾವುದಕ್ಕೆಲ್ಲ ಉಪಯೋಗವಾಗಲಿದೆ?

Update: 2016-11-12 13:15 IST

ಹೊಸದಿಲ್ಲಿ, ನ.12:  ಕೇಂದ್ರ ಸರಕಾರ ಹಳೆಯ 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿದಂದಿನಿಂದ ಅವುಗಳನ್ನು ಹೊಸ 500 ಹಾಗೂ 2000 ರೂ. ನೋಟುಗಳಿಗೆ ವಿನಿಮಯ ಮಾಡಿಕೊಳ್ಳಲು ಜನ ಬ್ಯಾಂಕುಗಳು ಹಾಗೂ ಎಟಿಎಂ ಗಳ ಮುಂದೆ ಸರತಿ ನಿಲ್ಲುತ್ತಿದ್ದಿದ್ದಾರೆ. ಈ ಎಲ್ಲಾ ಗೊಂದಲದ ನಡುವೆ, ಈಗ ನೂರು ರೂಪಾಯಿ ನೋಟುಗಳ ಕೊರತೆ ಎದುರಾಗಿದ್ದು  ಹೊಸ 2000 ರೂಪಾಯಿ ನೋಟು ಹೊಂದಿರುವವರು ಅವುಗಳನ್ನು ಏನನ್ನಾದರೂ ಖರೀದಿಸಲು  ಉಪಯೋಗಿಸಲೂ ಕಷ್ಟಪಡುತ್ತಿದ್ದಾರೆ. ಸದ್ಯಕ್ಕೆ ಸೆಲ್ಫಿ ತೆಗೆಸಿಕೊಳ್ಳುವ ಹೊರತಾಗಿ ಈ ನೋಟುಗಳು ಬೇರೆ ಯಾವುದಕ್ಕೂ ಹೆಚ್ಚು ಉಪಯೋಗಕ್ಕಿಲ್ಲವಾಗಿದೆ. ಯಾರು ಕೂಡಾ 2000 ರೂಪಾಯಿ ನೋಟುಗಳಿಗೆ ಚೇಂಜ್ ಒದಗಿಸುತ್ತಿಲ್ಲ.

ಈ ಹಿಂದಿನ ವರದಿಗಳಂತೆ ಮೆಡಿಕಲ್ ಸ್ಟೋರುಗಳು, ಪೆಟ್ರೋಲ್ ಪಂಪುಗಳು ಹಾಗೂ ರೈಲುಗಳಲ್ಲಿ  ಹಳೆ ನೋಟುಗಳನ್ನು ಸ್ವೀಕರಿಸಲಾಗುತ್ತಿತ್ತಾದರೂ ಯಾರೂ ಚೇಂಜ್ ನೀಡುತ್ತಿರಲಿಲ್ಲ.

ಶನಿವಾರದಂದು ಹಲವಾರು ನಗರಗಳ ಹಲವಾರು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಜನರ ಬಳಿ ಖರೀದಿಸಲು ನಗದು ಇಲ್ಲದೆ ಸಂಕಷ್ಟಕ್ಕೀಡಾಗಿರುವುದು ಸ್ಪಷ್ಟವಾಗುತ್ತಿದೆ.

ತರುವಾಯ ಇ-ಕಾಮರ್ಸ್ ವೆಬ್ ಸೈಟುಗಳು ಹಾಗೂ ಇತರ ಸೇವಾ ಪೂರೈಕೆದಾರರಾದ ಉಬರ್, ಓಲಾ ಕೂಡ ಕಡಿಮೆ ಮುಖಬೆಲೆಯ ನೋಟುಗಳನ್ನೇ ಸ್ವೀಕರಿಸುತ್ತಿದ್ದು ಅದಿಲ್ಲದೇ ಇದ್ದ ಪಕ್ಷದಲ್ಲಿ ಇಲೆಕ್ಟ್ರಾನಿಕ್ ವಾಲೆಟ್ ಮೂಲಕ ಪಾವತಿಸುವಂತೆ ಕೇಳುತ್ತಿತ್ತು. ತರುವಾಯ ಪೇಟಿಎಂ ಹಾಗೂ ಫ್ರೀಚಾರ್ಜ್  ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News