ಅಧ್ಯಕ್ಷ ಟ್ರಂಪ್ ಕಾನೂನು ಬಾಹಿರ ಆದೇಶ ನೀಡಿದರೆ ಅಮೆರಿಕನ್ ಸೇನೆ ಏನು ಮಾಡುತ್ತದೆ?
ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದಾಗ ಅವರ ಮುಂದೆ ಐಸಿಸ್‌ನಿಂದ ಆರಂಭಿಸಿ ರಷ್ಯಾವರೆಗೆ ರಾಷ್ಟ್ರೀಯ ಭದ್ರತೆಯ ವಿಷಯಗಳು ತುಂಬಿರುತ್ತವೆ. ಆದರೆ ಮೊದಲನೆಯ ವಿಷಯವೆಂದರೆ ಹಿರಿಯ ಸೇನಾಧಿಕಾರಿಗಳು ಹೊಸ ಕಮಾಂಡರ್ ಇನ್ ಚೀಫ್ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದೇ ಆಗಿದೆ.
ಸೇನೆಯ ಮೇಲೆ ನಾಗರಿಕ ನಿಯಂತ್ರಣವಿದೆ. ಯಾವುದೇ ಅಧ್ಯಕ್ಷರಿಗೂ ಪ್ರಶ್ನಾತೀತವಾದ ವಿಶ್ವಾಸವನ್ನು ಪ್ರಕಟಿಸಲಾಗುತ್ತದೆ. ಆದರೆ ಟ್ರಂಪ್ ಕಚೇರಿಗೆ ಆಗಮಿಸುವಾಗ ವಿವಿಧ ಪ್ರಚಾರಾಭಿಯಾನಗಳ ಆಶ್ವಾಸನೆಗಳು ಅವರ ಬೆನ್ನಿಗಿರುತ್ತದೆ. ಅದರಲ್ಲಿ ಅಮೆರಿಕದ ಸೇನೆಯ ಅಕ್ರಮ ಕೃತ್ಯಗಳ ಮೇಲೆ ವಿಚಾರಣೆಗೆ ಆದೇಶಿಸುವುದೂ ಒಂದಾಗಿದೆ.
ಆದರೆ ಭಯೋತ್ಪಾದಕ ಶಂಕಿತರನ್ನು ನೀರಿನಲ್ಲಿ ಮುಳುಗಿಸಿ (ವಾಟರ್‌ಬೋರ್ಡಿಂಗ್) ವಿಚಾರಣೆ ನಡೆಸುವ ಟ್ರಂಪ್ ಆಶ್ವಾಸನೆ ಅತೀ ಮುಖ್ಯವೆನಿಸಲಿದೆ. ವಾಟರ್‌ಬೋರ್ಡಿಂಗ್ ಮಾಡಿ ವಿಚಾರಣೆ ನಡೆಸುವುದನ್ನು ಅಮೆರಿಕ ಮತ್ತು ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಅಕ್ರಮ ಎಂದು ಪರಿಗಣಿಸಲಾಗಿದೆ. ಟ್ರಂಪ್ ಪ್ರಚಾರಾಭಿಯಾನಗಳನ್ನು ನೋಡಿರುವ ಕೆಲವು ಕಮಾಂಡರ್‌ಗಳು ಮತ್ತು ಸೇನಾ ತಂಡಗಳು ಈಗ ಯುದ್ಧ ರಂಗದಲ್ಲಿ ನಾಗರಿಕರ ಮೇಲೆ ಹಾನಿಯಾಗುವುದನ್ನು ಗಮನಿಸದೆ ಅಥವಾ ತೈಲ ನಿಕ್ಷೇಪ ಗಮನಿಸದೆ ಬಾಂಬ್ ಹಾಕುವುದು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯ ಭಯ ಆವರಿಸಿದೆ.
ಪೆಂಟಗಾನ್ ಮಾಧ್ಯಮ ಕಾರ್ಯದರ್ಶಿ ಪೀಟರ್ ಕುಕ್ ಅವರು ಈಗಾಗಲೇ ಎಲ್ಲಾ ಅಮೆರಿಕದ ಸೇನೆಗೆ ಕಾನೂನು ಬಾಹಿರ ಆದೇಶಗಳನ್ನು ಪಾಲಿಸದೆ ಇರುವ ಬದ್ಧತೆ ಇದೆ. ಹೀಗಾಗಿ ತಮ್ಮ ಸೇನೆಗೆ ಅದನ್ನು ಮಾಡುವಂತೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದಿದ್ದಾರೆ. "ಈ ಬಗ್ಗೆ ನಾವು ಚರ್ಚಿಸುವ ಅಗತ್ಯವೂ ಇಲ್ಲ. ಕಾನೂನನ್ನು ಉಲ್ಲಂಘಿಸಲು ಸೇನೆಗೆ ಆದೇಶ ಸಿಗುವ ಸಾಧ್ಯತೆಯೇ ಇಲ್ಲ" ಎಂದು ಕುಕ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಟ್ರಂಪ್ ಆಡಳಿತದಲ್ಲಿ ಬರಬಹುದಾದ ಇಂತಹ ಆದೇಶಗಳನ್ನು ಪಾಲಿಸದೆ ಇರುವ ಬಗ್ಗೆ ಹಲವಾರು ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆಡಳಿತದಿಂದ ಏನೇ ಯೋಜನೆ ಬಂದರೂ ಅದರಿಂದ ಹೇಗೆ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ವಿವರಿಸಲಾಗುವುದು. ಅಗತ್ಯವಿದ್ದಲ್ಲಿ ಸೇನಾ ವಕೀಲರು ಇನ್ನು ವಿವರಿಸಲಿದ್ದಾರೆ.ಹಾಗೇನಾದರೂ ಕಮಾಂಡರ್ ಕಾನೂನು ಬಾಹಿರ ಆದೇಶ ನೀಡಿದಲ್ಲಿ ರಾಜೀನಾಮೆ ನೀಡಬೇಕಾದ ಸವಾಲು ಮುಂದಿರುತ್ತದೆ. ಒಬ್ಬ ಹಿರಿಯ ಸೇನಾಧಿಕಾರಿಯ ಪ್ರಕಾರ ನಾಲ್ಕುತಾರಾ ಮಟ್ಟದಲ್ಲಿರುವ ಅತೀ ಹಿರಿಯ ಕಮಾಂಡರ್‌ಗಳು ಯಾವತ್ತೂ ರಾಜೀನಾಮೆ ನೀಡುವುದಿಲ್ಲ. ಹಾಗೆ ಮಾಡಿದರೆ ಸಮಸ್ಯೆಯನ್ನು ಎದುರಿಸಲು ತಮ್ಮ ಸೇನಾ ತಂಡವನ್ನು ಮುಂದೊಡ್ಡಿದ ಹಾಗಾಗುತ್ತದೆ. ಬದಲಾಗಿ ನಾಲ್ಕು ತಾರಾ ಕಮಾಂಡರ್ ತಮ್ಮನ್ನು ಸಾರ್ವಜನಿಕವಾಗಿ ಕೆಲಸದಿಂದ ಕಿತ್ತೊಗೆಯುವ ಸ್ಥಿತಿಯನ್ನು ಅಧ್ಯಕ್ಷರಿಗೆ ತರಲಿದ್ದಾರೆ. ಜಿನೀವಾ ಸಮ್ಮೇಳನದ ಉಲ್ಲಂಘನೆ ಅಥವಾ ಅಮೆರಿಕ ಸೇನೆಯ ಯಾವುದೇ ಯುದ್ಧ ಅಪರಾಧ ದೊಡ್ಡ ದುರಂತವಾಗಲಿದೆ ಎಂದು ಹಿರಿಯ ಅಮೆರಿಕ ಸೇನಾಧಿಕಾರಿ ಹೇಳಿದ್ದಾರೆ.
ಅಮೆರಿಕ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಅಪರಾಧಿ ನ್ಯಾಯಾಲಯದ ಸದಸ್ಯನಾಗಿಲ್ಲ. ಯಾವುದೇ ಕಾನೂನು ಬಾಹಿರ ಆದೇಶ ಕೊಟ್ಟಲ್ಲಿ ಅಮೆರಿಕದ ಸೇನಾ ಸಿಬ್ಬಂದಿಯ ಮೇಲಿನ ವಿಶ್ವಾಸಾರ್ಹತೆ ಜಾಗತಿಕವಾಗಿ ಕಡಿಮೆಯಾಗಲಿದೆ ಮತ್ತು ಅಮೆರಿಕ ಸೇನಾ ಮೈತ್ರಿ ಹೊಂದಿರುವ ದೇಶಗಳ ಜೊತೆಗಿನ ಸಂಬಂಧವೂ ಹಳಸಲಿದೆ. ಇದಕ್ಕೆ ಸೇರ್ಪಡೆಯಾಗಿ ಜಿನಿವಾ ಸಮ್ಮೇಳನ ಉಲ್ಲಂಘನೆ ಮಾಡಿರುವ ಸೇನಾ ಸದಸ್ಯರು ಹೇಗ್ ನ್ಯಾಯಾಲಯದ ಸದಸ್ಯ ರಾಷ್ಟ್ರಗಳಿಗೆ ಪ್ರಯಾಣಿಸುವಂತಿಲ್ಲ. ಹಾಗೆ ಪ್ರಯಾಣಿಸಿದಲ್ಲಿ ಬಂದಿಯಾಗುವ ಸಾಧ್ಯತೆಯಿರುತ್ತದೆ. ಅಮೆರಿಕ ಸೇನೆಯಲ್ಲಿ ಅಮೆರಿಕದ ಸೇನೆ ಮತ್ತು ಕಮಾಂಡರ್‌ಗಳು ಕಾನೂನು ಬಾಹಿರ ಕ್ರಮಗಳಿಗೆ ಅವಕಾಶವಿಲ್ಲ ಎನ್ನುವ ನಂಬಿಕೆ ಇದೆ. ಅದರಿಂದಾಗಿಯೇ ಅಮೆರಿಕದ ಶತ್ರುಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಶ್ವಾಸಾರ್ಹತೆಯೂ ಅವರಿಗೆ ಇದೆ. ವಾಟರ್‌ಬೋರ್ಡಿಂಗ್‌ನಂತಹ ಶಿಕ್ಷೆ ಅಮೆರಿಕ ಕಾನೂನು ಮತ್ತು ಜಿನಿವಾ ಸಮ್ಮೇಳನದ ಪ್ರಕಾರ ಕಾನೂನು ಬಾಹಿರ. ಆದರೆ ಟ್ರಂಪ್ ಅಥವಾ ಅವರನ್ನು ಬೆಂಬಲಿಸಿದ ಎಲ್ಲಾ ರಿಪಬ್ಲಿಕನ್ನರು ಇದನ್ನು ಹೇಗೆ ನೋಡುತ್ತಾರೆ ಎನ್ನುವ ಪ್ರಶ್ನೆಯಿದೆ. "ವಾಟರ್‌ಬೋರ್ಡಿಂಗ್ ಹಿಂಸೆಯಲ್ಲ. ಸೇನೆಯಲ್ಲಿ ನಾವು ನಮ್ಮದೇ ಸೈನಿಕರ ಮೇಲೆ ವಾಟರ್‌ಬೋರ್ಡಿಂಗ್ ಪ್ರಯೋಗಿಸುತ್ತೇವೆ" ಎಂದು ರಿಪಬ್ಲಿಕನ್ ಸೇನ್ ಟಾಮ್ ಕಾಟನ್ ಹೇಳುತ್ತಾರೆ. ಕೆಲವು ಅಮೆರಿಕದ ಸೇನೆ ತರಬೇತಿ ಸಂದರ್ಭದಲ್ಲಿ ವಾಟರ್‌ಬೋರ್ಡಿಂಗ್ ಮಾಡಿ ಸೈನಿಕರಿಗೆ ಯುದ್ಧ ಕಲೆ ಕಲಿಸುವುದಿದೆ. ಹೀಗಾಗಿ ಕಾನೂನು ಬದಲಿಸಬಹುದು ಎಂದು ಕಾಟನ್ ಹೇಳಿದ್ದಾರೆ. ಆದರೆ ಪೆಂಟಗಾನ್ ಮಾತ್ರ ವಾಟರ್‌ಬೋರ್ಡಿಂಗ್ ಕಾನೂನುಬದ್ಧ ಕ್ರಮವಲ್ಲ ಎಂದಿದೆ. "ಆಡಳಿತದ ನೀತಿ ನಿಲುವುಗಳು ಮತ್ತು ಕಾನೂನು ಈ ಬಗ್ಗೆ ಸ್ಪಷ್ಟವಾಗಿದೆ. ಅಮೆರಿಕದ ಸೇನೆ ಇದನ್ನು ಪ್ರಯೋಗಿಸಲು ಒಪ್ಪಲಾರದು" ಎಂದು ಕುಕ್ ಹೇಳಿದ್ದಾರೆ.
ಕೃಪೆ: edition.cnn.com