×
Ad

ಮುಂಬೈಯಲ್ಲಿ ಜನರ ಧಾವಂತ: ಬ್ಯಾಂಕ್-ಎಟಿಎಂ ಖಾಲಿ

Update: 2016-11-12 19:49 IST

ಮುಂಬೈ, ನ.12: ಹೊಸ ಅಥವಾ ರೂ. 100ರ ನೋಟುಗಳನ್ನು ಪಡೆಯಲು ಜನರ ಭಾರೀ ಧಾವಂತವು ನಗರಾದ್ಯಂತ ಬ್ಯಾಂಕ್ ಹಾಗೂ ಎಟಿಎಂಗಳ ಹೊರಗೆ ಇಂದು ಕಂಡು ಬಂದಿದೆ. ನಗದು ಮುಗಿದ ಕಾರಣ ಅವುಗಳಲ್ಲಿ ಕೆಲವು ಮುಚ್ಚಲ್ಪಟ್ಟವು.
ಕೈಗೆ ಹಣ ಪಡೆಯುವ ಅದೃಷ್ಟ ಪರೀಕ್ಷೆಗಾಗಿ ಜನರು ಮುಂಜಾನೆ 6ರಿಂದಲೇ ದಕ್ಷಿಣ ಮುಂಬೈ ಹಾಗೂ ಉಪನಗರಗಳ ಎಟಿಎಂ ಯಂತ್ರಗಳೆದರು ಸಾಲುಗಟ್ಟಿ ನಿಂತಿದ್ದರು.
ಲಾಲ್‌ಬಾಗ್, ವರ್ಲಿ, ಕುರ್ಲಾ, ಮಾಹಿಂ, ಪರೇಳ್ ಹಾಗೂ ದಾದರ್ ಸಹಿತ ದಕ್ಷಿಣ ಮುಂಬೈಯ ಹಲವು ಕಡೆಗಳಲ್ಲಿ ಎಟಿಎಂ ಯಂತ್ರಗಳು ಕೆಲಸ ಮಾಡುವುದಿಲ್ಲ. ಅದರಂತೆಯೇ ಅಂಧೇರಿ, ಘಾಟ್ಕೋಪರ್, ವಿಕ್ರೋಲಿ ಹಾಗೂ ಬೊರಿವಿಲಿ ಉಪನಗರಗಳಲ್ಲೂ ಆಗಿದೆಯೆಂದು ಜನರು ದೂರಿದ್ದಾರೆ. ಇದರಿಂದಾಗಿ ಅವರು ಬರಿಗೈಯಲ್ಲಿ ಮರಳಬೇಕಾಯಿತು.
ಎರಡನೆ ದಿನವೂ ನಗದು ದೊರೆಯದ ಭಾಯ್ಕಳದ ನಿವಾಸಿ ಎ.ಕೆ.ಜೈನ್ ಎಂಬವರ ಜಂಘಾ ಬಲವೇ ಉಡುಗಿ ಹೋಗಿತ್ತು. ದೊಡ್ಡ ನೋಟುಗಳ ರದ್ದತಿಯಿಂದ ಪ್ರತಿ ತಿಂಗಳ 1ರಿಂದ 8ನೆ ದಿನಾಂಕದ ನಡುವೆ ಬ್ಯಾಂಕ್ ಅಥವಾ ಎಟಿಎಂಗಳಿಂದ ಹಣ ತೆಗೆಯುವ ದುಡಿಯುವ ವರ್ಗಕ್ಕೆ ತೊಂದರೆಯಾಗಿದೆ. ಘೋಷಣೆಗೆ ಮೊದಲೇ ಹಣ ತೆಗೆದವರಿಗೆ ರೂ. 500 ಹಾಗೂ 1000ರಿಂದ ನೋಟುಗಳು ದೊರೆತ್ತಿದ್ದವು. ಈಗವರು ಅದರ ಬದಲಾವಣೆಗೆ ಕಂಬ ಕಂಬ ಅಲೆಯುತ್ತಿದ್ದಾರೆಂದು ಅವರು ದೂರಿದ್ದಾರೆ.
ತಾನು ಎಲ್‌ಬಿಎಸ್ ರಸ್ತೆಯ 2 ಬ್ಯಾಂಕ್‌ಗಳಲ್ಲಿ ಅದೃಷ್ಟ ಪರೀಕ್ಷಿಸಲು ಹೋಗಿದ್ದೆ. ಆದರೆ, ಅಲ್ಲಿ ಭಾರೀ ಸರತಿಯ ಸಾಲು ಕಂಡು ಹಾಗೆಯೇ ಹಿಂದಿರುಗಿ ಬಂದೆನೆಂದು ಔಷಧ ಸಂಸ್ಥೆಯೊಂದರ ಹಿರಿಯ ಕಾರ್ಯವಾಹಿ, ಕುರ್ಲಾ ನಿವಾಸಿ ಅಮಿತ್ ಮಿಶ್ರಾ ಎಂಬವರು ಹೇಳಿದ್ದಾರೆ. ಆದಾಗ್ಯೂ, ಹೊಸ ನೋಟು ಹಂಚಲು ಬ್ಯಾಂಕ್ ನೌಕರರು ಹೆಚ್ಚುವರಿ ಕೆಲಸ ಮಾಡುತ್ತಿರುವುದನ್ನು ಅವರು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News