ಯುವ ತಂತ್ರಜ್ಞರ ಜ್ಞಾನ ಮತ್ತು ತಾಂತ್ರಿಕ ಪರಿಣತಿ ಸಮಾಜದಭಿವೃದ್ಧಿಗೆ ಬಳಕೆಯಾಗಲಿ : ಡಿ.ಶಿವಕುಮಾರ್

Update: 2016-11-12 14:51 GMT

ಮಂಗಳೂರು,ನ.12:ಯುವ ತಂತ್ರಜ್ಞರ ಜ್ಞಾನ ಮತ್ತು ತಾಂತ್ರಿಕ ಪರಿಣತಿ ಸಮಾಜದಭಿವೃದ್ಧಿಗೆ ಬಳಕೆಯಾಗಲಿ ಎಂದು ಪೆಪ್ಸಿ ಕೋ ಇಂಡಿಯಾ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಶಿವಕುಮಾರ್ ಕರೆ ನೀಡಿದರು.

 ಸುರತ್ಕಲ್‌ನಲ್ಲಿರುವ ಎನ್‌ಐಟಿಕೆ ಯ 14ನೆ ಘಟಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಮುಂದಿನ ಮೂರು ದಶಕಗಳಲ್ಲಿ ಜಗತ್ತಿನಲ್ಲಿ ಭಾರತ ಅತ್ಯಂತ ಹೆಚ್ಚು ಯುವ ಜನರನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿರುವುದರಿಂದ ಈ ಮಾನವ ಸಂಪನ್ಮೂಲದ ಮೂಲಕ ಸಮಾಜವನ್ನು ಮುನ್ನಡೆಸಬೇಕಾದರೆ.ನೈತಿಕ ವೌಲ್ಯವನ್ನು ಹೊಂದಿದ,ತಂತ್ರಜ್ಞಾನದ ಪರಿಣತಿಯನ್ನು ಹೊಂದಿದ ಸಮಾಜವನ್ನು ಮುನ್ನಡೆಸಬಲ್ಲ ಯುವ ಜನರ ಅಗತ್ಯವಿದೆ ಎಂದು ಶಿವಕುಮಾರ್ ತಿಳಿಸಿದರು.ಜ್ಞಾನ ಎನ್ನುವುದು ವೌಲ್ಯ ಹೊರತು ಅದೊಂದು ಸರಕೆಂದು ಪರಿಭಾವಿಸಬಾರದು.ವಿಷಯದ ಬಗೆಗಿನ ವಿಮರ್ಶಾತ್ಮಕ ಚಿಂತನೆ,ಐದು ವರ್ಷದ ಮಗುವಿನಲ್ಲಿರುವ ಕುತೂಹಲ,ತಿಳಿದುಕೊಳ್ಳಬೇಕು ಎಂಬ ಹಂಬಲ ಯುವ ತಂತ್ರಜ್ಞರಲ್ಲಿರಬೇಕು.

ನಮ್ಮ ಬೆಳವಣಿಗೆಗೆ ಕಾರಣರಾದ ಹೆತ್ತವರು,ಸಮಾಜದ ಕೊಡುಗೆಯನ್ನು ಮರೆಯಬಾರದು.ಹಣ ಸಂಪತ್ತು ನಮ್ಮ ಬದುಕಿನಲ್ಲಿ ಅಗತ್ಯವಿದೆ ಆದರೆ ಅದೊಂದೆ ಸಾಲದು.ಜಾಗತಿಕ ನೆಲೆಯಲ್ಲಿ ನಮ್ಮ ಜ್ಞಾನ ,ಮೌಲ್ಯಗಳ ಮೂಲಕ ನಾವು ಇತರರಿಗೆ ಯಾವ ರೀತಿಯ ಕೊಡುಗೆ ನೀಡುತ್ತೇವೆಎನ್ನುವ ಮೂಲಕ ನಾವು ಇತರರಿಗೆ ಮಾದರಿಯಾಗಬೇಕು ಎಂದು ಶಿವಕುಮಾರ್ ತಿಳಿಸಿದರು. 14ನೆ.ಘಟಿಕೋತ್ಸವ,1597 ಪದವಿ ಪ್ರಧಾನ:-14ನೆ ಘಟಿಕೋತ್ಸವದಲ್ಲಿ 802 ಬಿಟೆಕ್,544 ಎಂಟೆಕ್,22 ಎಂಟೆಕ್(ಸಂಶೋಧನೆ), 90ಎಂಸಿಎ,37 ಎಂಬಿಎ ,45 ಎಂಸ್ಸಿ,57 ಪಿಎಚ್‌ಡಿ ಪದವಿಧರರಿಗೆ ಪದವಿ ಘೋಷಣೆ ಮಾಡಲಾಯಿತು.ಈ ಪೈಕಿ 1001 ಮಂದಿಗೆ ನೇರವಾಗಿ ಪದವಿ ನೀಡಲಾಯಿತು.41ಮಂದಿಗೆ ಪದವೀಧರರಿಗೆ ಚಿನ್ನದ ಪದಕ ನೀಡಲಾಯಿತು.23ವಿಶೇಷ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು ಈ ಪೈಕಿ ಬಿಟೆಕ್ ಪದವೀಧರ ಅಜಯ ವಿ ಕೃಷ್ಣನ್ ನಾಲ್ಕು ಹಾಗೂ ಮಾನಸ ಭಟ್‌ಎಂ ಭಟ್ ಹಾಗೂ ಬಿಟೆಕ್ ವಿಭಾಗದ ಮಾನಸ ಭಟ್ ಕೆ.ಐ ತಲಾ ಮೂರು ಚಿನ್ನದ ಪಡೆದು ಕೊಂಡಿದ್ದಾರೆ.

   ಘಟಿಕೋತ್ಸವದ ಅಧ್ಯಕ್ಷತೆಯನ್ನು ಎನ್‌ಐಟಿಕೆಯ ಆಡಳಿತ ಮಂಡಳಿಯ ಅಧ್ಯಕ್ಷೆ ವನಿತಾ ನಾರಾಯಣನ್ ವಹಿಸಿದ್ದರು.ಎನ್‌ಯಟಿಕೆಯ ಪ್ರಭಾರ ನಿರ್ದೇಶಕ ಪ್ರೊ.ಕೆ.ಎನ್.ಲೋಕೇಶ್ ಸ್ವಾಗತಿಸಿ ಸಂಸ್ಥೆಯ ವರದಿ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News