'ವಿಳಂಬ ನ್ಯಾಯವೆಂದರೆ ನ್ಯಾಯದ ನಿರಾಕರಣೆ' ವಿಚಾರಗೋಷ್ಠಿ

Update: 2016-11-12 16:12 GMT

ಮಂಗಳೂರು,ನ.12:ನ್ಯಾಯದಾನದ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಹಾಗೂ ತ್ವರಿತ ನ್ಯಾಯಕ್ಕಾಗಿ ಅಳವಡಿಸಲಾದ ಸರಕಾರದ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮತ್ತು ಈ ಬಗ್ಗೆ ಜಾಗೃತಿ ಮೂಡಿಸಿದಾಗ ತ್ವರಿತ ನ್ಯಾಯ ತೀರ್ಮಾನ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಬಹುದು ಎಂದು ಮಂಗಳೂರು ಪೊಲೀಸ್ ಕಮೀಶನರ್ ಚಂದ್ರ ಶೇಖರ್ ತಿಳಿಸಿದ್ದಾರೆ.

      ಪ್ರಿಸನ್ ಮಿನಿಸ್ಟ್ರಿ ಆಫ್ ಇಂಡಿಯಾ (ಪಿಎಂಐ)ಇದರ ಕರ್ನಾಟಕ ರಾಜ್ಯ ಮಟ್ಟದ 5ನೆ ಸಮ್ಮೇಳನದ ಎರಡನೆ ದಿನ ವಿಳಂಬ ನ್ಯಾಯದಾನವೆಂದರೆ ನ್ಯಾಯದ ನಿರಾಕರಣೆ ಎಂಬ ವಿಚಾರ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

  ಕಾರಾಗೃಹವೂ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ವಿಭಾಗ ಇಲ್ಲಿನ ವ್ಯವಸ್ಥೆಯಲ್ಲೂ ತಪ್ಪುಗಳಾದಂತೆ ಎಚ್ಚರ ವಹಿಸಬೇಕಾಗಿದೆ.ಜೈಲಿಗೆ ಬಂದ ವ್ಯಕ್ತಿ ಮನಪರಿವರ್ತನೆಯಾಗಿ ಉತ್ತಮ ವ್ಯಕ್ತಿಯಾಗಿ ಸಮಾಜಕ್ಕೆ ಮರಳುವಂತಾಗಬೇಕು ಹೊರತು ಇನ್ನಷ್ಟು ದೊಡ್ಡ ಕ್ರಿಮಿನಲ್ ವ್ಯಕ್ತಿಯಾಗಿ ಮಾರ್ಪಾಡಾಗುವಂತೆ ಆಗಬಾರದು ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.ಕಾನೂನಿನ ಬಗ್ಗೆಯೂ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ಚಂದ್ರಶೇಖರ್ ತಿಳಿಸಿದರು.

 ಗೋಷ್ಠಿಯಲ್ಲಿ ನ್ಯಾಯವಾದಿ ಎಂ.ಪಿ.ನರ್ಹೊನ್ನಾ ಮಾತನಾಡುತ್ತಾ,80ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿದೆ.ಈ ಪೈಕಿ 62ಲಕ್ಷ ಪ್ರಕರಣಗಳು ಜಿಲ್ಲಾ ಮಟ್ಟದ ಹಾಗೂ ಅಧೀನ ನ್ಯಾಯಾಲಯದಲ್ಲಿದೆ 16ಲಕ್ಷ ಪ್ರಕರಣಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಉಳಿದಿದೆ.ಇದಕ್ಕೆ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಕೊರತೆ ಮತ್ತು ನ್ಯಾಯವಾದಿಗಳ ಸಾಮರ್ಥ್ಯವನ್ನು ಅವಲಂಬಿಸಿದೆ .ತ್ವರಿತ ನ್ಯಾಯವೆಂದರೆ ಅವಸರದ ನ್ಯಾಯ ತೀರ್ಮಾನವಾಗಬಾರದು ಎಂದರು.

        ಸಾಮಾಜಿಕ ಕಾರ್ಯಕರ್ತೆ ದುಲ್ಸಿನ್ ಮಾತನಾಡುತ್ತಾ, ತ್ವರಿತ ನ್ಯಾಯದಾ ನವಾಗಬೇಕಾಗಿದ್ದರೆ ಜನಸಾಮಾನ್ಯರಲ್ಲೂ ಈ ಬಗ್ಗೆ ಜಾಗೃತಿ ಮೂಡಬೇಕಾಗಿದೆ.ತ್ವರಿತ ನ್ಯಾಯಾದಾನದ ನ್ಯಾಯಾಲಯಗಳು ಇನ್ನಷ್ಟು ಸಕ್ರೀಯವಾಗಬೇಕಾಗಿದೆ.ಇದರಿಂದ ಸಾಕಷ್ಟು ಬಾಲಾಪರಾಧಿಗಳು,ವಿಚಾರಣಾಧೀನ ಕೈದಿಗಳು ಬಂಧಿಗಳಾಗಿ ಇರಬೇಕಾದ ಸ್ಥಿತಿಯನ್ನು ಬದಲಾಯಿಸಬಹುದಾಗಿದೆ ಎಂದರು.ಕಾರ್ಯಕ್ರಮವನ್ನು ಮೈಕಲ್ ನರ್ಹೋನ್ನಾ ನಿರೂಪಿಸಿದರು.ಗೊಷ್ಠಿಯ ಅಧ್ಯಕ್ಷತೆಯನ್ನು ಪ್ರಿಸನ್ ಮಿನಿಸ್ಟ್ರಿ ಆಫ್ ಇಂಡಿಯಾ ಸಂಘಟನೆಯ ರಾಜ್ಯ ಘಟಕದ ಮುಖಂಡ ಡಾ.ರೋನಾಲ್ಡ್ ಅನಿಲ್ ಫೆರ್ನಾಂಢೀಸ್‌ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News