ಮಲೆಯಾಲಂ ನಟಿ ರೇಖಾ ಮೋಹನ್ ಆತ್ಮಹತ್ಯೆ
Update: 2016-11-12 22:13 IST
ತ್ರಿಶೂರ‍್, ನ.12: ಮಲೆಯಾಲಂ ಚಿತ್ರನಟಿ ರೇಖಾ ಮೋಹನ್ ಅವರ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ತ್ರಿಶೂರ‍್ ನ ಶೋಭಾ ಸಿಟಿ ಅಪಾರ್ಟ್‌ಮೆಂಟ್ ನಲ್ಲಿ ಇಂದು ಪತ್ತೆಯಾಗಿದೆ.
ದುಬೈನಲ್ಲಿರುವ ಪತಿ ಕಳೆದ ಎರಡು ದಿನಗಳಿಂದ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದ್ದರೂ, ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಇಂದು ಆಕೆಯ ಅಪಾರ್ಟ್‌ಮೆಂಟ್ ಗೆ ಆಗಮಿಸಿ ಶೋಧ ನಡೆಸಿದಾಗ ಬಾಗಿಲಿಗೆ ಒಳಗಿನಿಂದ ಲಾಕ್ ಮಾಡಿರುವುದು ಗೊತ್ತಾಗಿತ್ತು. ಪೊಲೀಸರು ಬಳಿಕ ಬೀಗ ಮುರಿದು ಒಳ ಪ್ರವೇಶಿಸಿದಾಗ ರೇಖಾ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತ್ರಿಶೂರ‍್ ಮೆಡಿಕಲ್ ಕಾಲೇಜಿಗೆ ಕಳಿಸಲಾಗಿದೆ.
ಉದ್ಯಾನಪಲಕಮ್, ಯಾತ್ರಮೋಯಿ, ನಿ ವರುವಲಮ್ ಚಿತ್ರದ ಮೂಲಕ ಪ್ರಸಿದ್ಧರಾಗಿದ್ದ ರೇಖಾ ಕಿರು ಚಿತ್ರ ಮಾಯಮ್ಮದಲ್ಲೂ ನಟಿಸಿದ್ದರು.