ನಮ್ಮ ಜಲಪ್ರದೇಶಕ್ಕೆ ನುಗ್ಗಿದ ಚೀನಾ ನೌಕೆಗಳು: ಜಪಾನ್
Update: 2016-11-13 00:15 IST
ಟೋಕಿಯೊ, ನ. 12: ಪೂರ್ವ ಚೀನಾ ಸಮುದ್ರದ ವಿವಾದಿತ ದ್ವೀಪಗಳ ಸುತ್ತಲಿನ ಜಲಪ್ರದೇಶಗಳಿಗೆ ಚೀನಾದ ತಟರಕ್ಷಣಾ ಪಡೆಯ ನೌಕೆಗಳು ಪ್ರವೇಶಿಸಿವೆ ಎಂದು ಜಪಾನ್ ತಟರಕ್ಷಣಾ ಪಡೆ ಹೇಳಿದೆ.
ಇದು ಈ ವಾರದಲ್ಲಿ ನಡೆದ ಇಂಥ ಎರಡನೆ ಘಟನೆಯಾಗಿದೆ.
ಜಪಾನ್‌ನ ನಿಯಂತ್ರಣದಲ್ಲಿರುವ ದ್ವೀಪ ಸಮುಚ್ಚಯದ ಸುತ್ತಲಿನ ಜಲಪ್ರದೇಶಕ್ಕೆ ನಾಲ್ಕು ತಟರಕ್ಷಣಾ ಪಡೆಯ ಹಡಗುಗಳು ಬೆಳಗ್ಗೆ 10.30ಕ್ಕೆ ಪ್ರವೇಶಿಸಿವೆ ಹಾಗೂ ಎರಡು ಗಂಟೆಯ ಬಳಿಕ ಅಲ್ಲಿಂದ ಹೋಗಿವೆ ಎಂದು ಜಪಾನ್ ತಟರಕ್ಷಣಾ ಪಡೆ ತಿಳಿಸಿದೆ.
ಕಳೆದ ರವಿವಾರ ಇಂಥದೇ ಘಟನೆಯೊಂದು ನಡೆದಿದ್ದು, ಟೋಕಿಯೊ ಚೀನಾದ ವಿದೇಶ ಕಚೇರಿಗೆ ಬೀಜಿಂಗ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ಮೂಲಕ ದೂರು ಸಲ್ಲಿಸಿತ್ತು.