×
Ad

ಈ ನಿರ್ಧಾರದಿಂದ ಬವಣೆಪಡುತ್ತಿರುವವರು ಯಾರು?

Update: 2016-11-15 00:14 IST

ಮಾನ್ಯರೆ,
ಕಾಳಧನವನ್ನು ಹಿಮ್ಮೆಟ್ಟಿಸಲು ಪ್ರಧಾನಿಯವರು ನೋಟು ನಿಷೇಧವನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಆದರೆ ಅವರು ಇದನ್ನು ಕಾರ್ಯರೂಪಕ್ಕೆ ತರುವ ಭರದಲ್ಲಿ ಸಾಮಾನ್ಯಜನತೆಯನ್ನು ಮರೆತಿದ್ದಾರೆ. 500 ಹಾಗೂ 1000ರೂ.ಗಳ ನೋಟುಗಳನ್ನು ನಿರ್ಭಂದಿಸುವ ಮುನ್ನ ಕೇಂದ್ರ ಸರಕಾರ ಮುನ್ನೆಚ್ವರಿಕೆಯನ್ನು ತೆಗೆದು ಕೊಳ್ಳಬೇಕಾದ ಅಗತ್ಯತೆ ಇತ್ತು.
ನಿಜವಾಗಿಯೂ ಈ ಕ್ರಮದಿಂದ ಶ್ರೀಮಂತ ವರ್ಗಕ್ಕೆ ತೊಂದರೆಯೇನೂ ಆಗಿಲ್ಲ. ಅವರ ಪ್ರಭಾವದ ಮಿತಿಯಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳುವುದು ಕಷ್ಟವೇನಲ್ಲ. ಇಷ್ಟಕ್ಕೂ ಕಾಳಧನಿಕರು ಕಪ್ಪುಹಣವನ್ನು ಹಣದ ರೂಪದಲ್ಲಿ ಇಟ್ಟಿದ್ದಾರೆ ಎಂಬುದರ ಮೇಲೆ ಯಾರಿಗೂ ನಂಬಿಕೆ ಇಲ್ಲ. ಭೂಮಿಯ ಮೇಲೋ, ಚಿನ್ನದ ಮೇಲೋ ಅವರು ಹೂಡಿದ ಹಣ ಅಬಾಧಿತವಾಗಿರುತ್ತದೆ. ಆದರೆ ಮಧ್ಯಮವರ್ಗ ಮತ್ತು ಬಡವರು ಈ ಯೋಜನೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಬ್ಯಾಂಕುಗಳನ್ನು ಅಲೆಯಬೇಕಾಗಿದೆ.
ಭಾರತದಲ್ಲಿ ದಿನ ನಿತ್ಯದ ಕೂಲಿಯನ್ನೇ ನಂಬಿ ಅಸಂಖ್ಯಾತ ಬಡವರು ಜೀವನ ನಡೆಸುತ್ತಿದ್ದಾರೆ. ಅವರಲ್ಲಿ ಕೆಲವರು ಆ ಹಣದಲ್ಲೂ ಸಹ ತಮ್ಮ ಮಕ್ಕಳ ಮದುವೆಗೋ, ಆಸ್ಪತ್ರೆಯ ಖರ್ಚಿಗೆಂದೋ ಎತ್ತಿಟ್ಟುಕೊಂಡಿರುತ್ತಾರೆ. ಆದರೆ ಕೇಂದ್ರ ಸರಕಾರದ ಈ ನಿರ್ಧಾರದಿಂದ ಇಂತಹವರ ಗೋಳು ಹೇಳತೀರದಾಗಿದೆ.
 ಮುಂದೆಯಾದರೂ ಮೋದಿಯವರು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಜನಸಾಮಾನ್ಯರ ದೃಷ್ಟಿಕೋನದಿಂದ ಕೊಂಚ ಯೋಚಿಸುವುದನ್ನು ಕಲಿಯಲಿ.
 

Writer - -ವಸು ಕುಮಾರ್, ಬೆಂಗಳೂರು

contributor

Editor - -ವಸು ಕುಮಾರ್, ಬೆಂಗಳೂರು

contributor

Similar News