ದುಬೈಗೆ ಬಂತು ವಿಶ್ವದ ಅತ್ಯಂತ ದುಬಾರಿ ವಜ್ರ
ವಿಶ್ವದ ಅತೀ ಅಮೂಲ್ಯ ವಜ್ರವಾಗಿರುವ ಕಾನ್ಸ್ಟೆಲ್ಲೇಶನ್ ಅನ್ನು ದುಬೈನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. 63 ಮಿಲಿಯ ಡಾಲರ್ ಮೌಲ್ಯದ ಈ ವಜ್ರವನ್ನು ಬೋಟ್ಸವಾನಾದ ಕಾರೋವೇ ಗಣಿಯಲ್ಲಿ ಲ್ಯುಕಾರಾ ಡೈಮಂಡ್ ಕಾರ್ಪೋರೇಶನ್ ಪತ್ತೆ ಮಾಡಿದೆ.
ಈ ಬಣ್ಣವಿಲ್ಲದ ವಜ್ರವು 812,77 ಕ್ಯಾರೆಟ್ ಇದೆ ಎಂದು ತಿಳಿಯಲಾಗಿದೆ. ಅಮೆರಿಕದ ಹರಳು ಸಂಸ್ಥೆಯಲ್ಲಿ ಪರೀಕ್ಷಿಸಲಾದ ಅತೀ ದೊಡ್ಡ ಪರಿಶುದ್ಧ ವಿಧದ 1ಎಬಿ ವಜ್ರ ಎನ್ನಲಾಗಿದೆ. 1ಎಬಿ ವಿಧವನ್ನು ಉದ್ಯಮದಲ್ಲಿ ಅತೀ ಅಪರೂಪದ ಸಹಜ ವಜ್ರವೆಂದು ತಿಳಿಯಲಾಗಿದೆ. ದುಬೈ ಮುಲ್ಟಿ ಕಮೋಡಿಟೀಸ್ ಸೆಂಟರ್‌ನ ಕಾರ್ಯಕಾರಿ ಅಧ್ಯಕ್ಷ ಮತ್ತು ಕಿಂಬರ್ಲಿ ಪ್ರೊಸೆಸ್‌ನ ಅಧ್ಯಕ್ಷ ಅಹಮ್ಮದ್ ಬಿನ್ ಸುಲೇಮಾನ್ ಅವರು ನೆಮಿಸಿಸ್ ಇಂಟರ್ನಾಷನಲ್ ನಿರ್ದೇಶಕ ನಿಕೊಲಾಸ್ ಪೊಲಾಕ್, ಗ್ರಿಸೊಗೊನೊದ ಕಾರ್ಯಕಾರಿ ಮಂಡಳಿ ಸದಸ್ಯ ಮತ್ತು ಸಂಸ್ಥಾಪಕ ಫಾವಾಜ್ ಗ್ರುವೊಸಿ ಮತ್ತು ಲ್ಯುಕಾರ ವಜ್ರ ಮಂಡಳಿಯ ಮಾರಾಟ ನಿರ್ದೇಶಕ ಸ್ಟೀವನ್ ಲಿಂಕನ್ ಅವರು ಉಪಸ್ಥಿತರಿದ್ದ ಪತ್ರಿಕಾ ಗೋಷ್ಠಿಯಲ್ಲಿ ವಜ್ರದ ವಿಷಯವನ್ನು ತಿಳಿಸಿದ್ದಾರೆ.
ವಿಶಿಷ್ಟ ವಿವರಗಳು
► ಕಾನ್‌ಸ್ಟೆಲೇಶನ್ 812.77 ಕ್ಯಾರೆಟ್ ವಜ್ರವಾಗಿದ್ದು, ಒಟ್ಟು 162 ಗ್ರಾಂಗಳಷ್ಟು ಭಾರವಿದೆ.
► ಹರಳನ್ನು 63 ಮಿಲಿಯ ಡಾಲರಿಗೆ ಪಡೆದುಕೊಳ್ಳಲಾಗಿದೆ. ಕ್ಯಾರೆಟ್ ಒಂದಕ್ಕೆ ಸರಾಸರಿ 77,649 ಡಾಲರ್ ಬೆಲೆ ಬಾಳುತ್ತದೆ.
► ಈ ವಜ್ರವು ದೊಡ್ಡದಾದ ಸಿಕಲರ್, ಪಾಲಿಶ್ಡ್ ವಜ್ರವಾಗಿ ಬಹುಶ 300 ಕ್ಯಾರೆಟ್‌ಗಳಲ್ಲಿ ಹೊರಬರಲಿದೆ.
► ಗುಣಮಟ್ಟ ವಜ್ರಗಳ ವಿಶ್ವದ ಶೇ. 2ರಷ್ಟು ಉತ್ಪಾದನೆಯಲ್ಲಿ ಮಾತ್ರ ಈ ಮಟ್ಟದ ಬಣ್ಣ ಮತ್ತು ಪರಿಶುದ್ಧತೆ ಇರುತ್ತದೆ.
► 20 ಬಿಲಿಯನ್ ಕ್ಯುಬಿಕ್ ಮೀಟರ್ ಭೂಮಿಯನ್ನು ಕೊರೆದು ಈ ಕಾನ್‌ಸ್ಟೆಲೇಶನ್ ವಜ್ರವನ್ನು ಪಡೆಯಲಾಗಿದೆ.
► ವಜ್ರವು ಗರಿಷ್ಠ 64 ಎಂಎಂ ಅಗಲವಿದೆ.
► ಈವರೆಗೆ ಇತಿಹಾಸದಲ್ಲಿ ಅಗೆಯಲಾದ ಮೂರನೇ ಅತೀ ದೊಡ್ಡ ವಜ್ರವಾಗಿದೆ ಕಾನ್‌ಸ್ಟಲೇಶನ್
► ಈ ಗಣಿಯಲ್ಲಿ ಅಗೆಯಲಾದ ಗುಣಮಟ್ಟದ ವಜ್ರಗಳ ಸಂಪೂರ್ಣ ಉತ್ಪಾದನೆಯು ಒಂದು ಸಣ್ಣ ಸೂಟ್‌ಕೇಸ್‌ನಲ್ಲಿ ಹಿಡಿಯುತ್ತದೆ.
► ಇದು ಜಾಗತಿಕವಾಗಿ ಅತೀ ಮೌಲ್ಯಯುತ ಗಡಸು ವಜ್ರವಾಗಿದೆ.
► ಕಾನ್‌ಸ್ಟಲೇಶನ್ ವಜ್ರದ ಎಫ್‌ಟಿಐಆರ್ ವಿಶ್ಲೇಷಣೆಯಲ್ಲಿ ಅದು 1 ಎಬಿಯದ್ದೆಂದು ತಿಳಿದು ಬಂದಿದೆ. ಅತೀ ಬೆಲೆ ಬಾಳುವ 11ಎ ವಜ್ರಕ್ಕಿಂತಲೂ ಇದು ಹೆಚ್ಚು ಬೆಲೆ ಬಾಳುತ್ತದೆ.
► ಕಾನ್‌ಸ್ಟಲೇಶನ್ ಅತೀ ದೊಡ್ಡ ಪರಿಶುದ್ಧ 1ಎಬಿ ವಜ್ರವಾಗಿರುವ ಕಾರಣ ಐತಿಹಾಸಿಕ ಪ್ರಾಮುಖ್ಯತೆ ಪಡೆದಿದೆ.
ಕೃಪೆ:khaleejtimes.com