×
Ad

ಸಿಸೇರಿಯನ್‌ನಲ್ಲಿ ಜನಿಸಿದ ಶಿಶುಗಳಿಗೆ ಬೊಜ್ಜುದೇಹ ಸಾಧ್ಯತೆ

Update: 2016-11-15 14:59 IST

ವಾಷಿಂಗ್ಟನ್, ನ. 15:ಸಿಸೇರಿಯನ್ ಹೆರಿಗೆ ಮೂಲಕ ಜನಿಸಿದ ಮಕ್ಕಳಿಗೆ ಸಾಮಾನ್ಯ ಹೆರಿಗೆಯಲ್ಲಿ ಹುಟ್ಟಿದ ಮಕ್ಕಳಿಗಿಂತಲೂ ದಪ್ಪದೇಹ ಇರುವ ಸಾಧ್ಯತೆ ಶೇ.40ರಷ್ಟು ಇದೆ ಎಂದು ಅಧ್ಯಯನವೊಂದು ತಿಳಿಸಿದೆ. ಸಿಸೇರಿಯನ್ ಮೂಲಕ ಜನಿಸಿದ ಮಕ್ಕಳ ಅಮ್ಮಂದಿರು ಭಾರೀ ಭಾರದೇಹ ಹೊಂದಿದ್ದರೆ ದಪ್ಪದೇಹದ ಸಾಧ್ಯತೆ ಶೇ. 40ಕ್ಕಿಂತಲೂ ಅಧಿಕವಾಗಿದೆ ಅಧ್ಯಯನ ತಿಳಿಸಿದೆ ಎಂದು ವರದಿಯಾಗಿದೆ.

 ಹೆಚ್ಚುಭಾರದೇಹದ ಅಮ್ಮಂದಿರಿಗೆ ಸಾಮಾನ್ಯ ಹೆರಿಗೆಯಾದರೆ ಶಿಶುವಿಗೆ ದಪ್ಪದೇಹ ಬರುವ ಸಾಧ್ಯತೆಗಳು ಕಡಿಮೆಯಿದೆ ಎಂದು ಅಮೆರಿಕದ ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿಯಲ್ಲಿ ನಡೆದ ಅಧ್ಯಯನದಿಂದ ಬಹಿರಂಗವಾಗಿದೆ.

ಹೆರಿಗೆ ಸಮಯದಲ್ಲಿ ಅಮ್ಮಂದಿರ ಭಾರ ವಿದ್ಯಾಭ್ಯಾಸ, ಹೆರಿಗೆಗೆ ಮುಂಚಿನ ಬಾಡಿ ಮಾಸ್ ಇಂಡಕ್ಸ್, ಗರ್ಭಧಾರಣೆಯ ಸಮಯದಲ್ಲಿ ಹೆಚ್ಚಳಗೊಂಡ ಭಾರ, ವಾಯು ಮಲಿನೀಕರಣ, ಜನಸಮಯದ ಭಾರ ಇವುಗಳ ಆಧಾರದಲ್ಲಿ ಅಧ್ಯಯನವನ್ನು ನಡೆಸಲಾಗಿದೆ.

ಹೆಚ್ಚು ಭಾರವಿರುವ ತಾಯಂದಿರು ಹೆಚ್ಚು ದಪ್ಪವಿರುವ ಶಿಶುವಿಗೆ ಜನ್ಮ ನೀಡುತ್ತಾರಾದರೂ ಹೆರಿಗೆ ಸಿಸೇರಿಯನ್ ಮೂಲಕವಾಗಿದ್ದರೆ ಇದರ ಸಾಧ್ಯತೆ ಇನ್ನಷ್ಟು ಹೆಚ್ಚಿದೆ ಎಂದು ಆಧ್ಯಯನದಲ್ಲಿ ತಿಳಿದುಬಂದಿದೆ.

ಸಾಮಾನ್ಯ ಪ್ರಸವದಲ್ಲಿ ಮಗು ಹೊರಬರುವ ಬರ್ತ್ ಕೆನಾಲ್‌ನ ಜೀನ್‌ಗಳ ಪ್ರಕ್ರಿಯೆ ಇಂತಹ ಬದಲಾವಣೆಗಳಿಗೆ ಕಾರಣವಾಗುತ್ತವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಈ ಜೀನ್‌ಗಳು ಮಕ್ಕಳ ಆರೋಗ್ಯ, ಪ್ರತಿರೋಧ ಸಾಮರ್ಥ್ಯ ಮುಂತಾದುವುಗಳಿಗೂ ಬಾಧಕಗಳಾಗುತ್ತವೆ ಎಂದು ಅಧ್ಯಯನಕ್ಕೆ ನೇತೃತ್ವವವನ್ನು ನೀಡಿದ ನೋಯಲ್ ಮುಲ್ಲರ್ ತಿಳಿಸಿದ್ದಾರೆಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News