ಭಕ್ತರು, ಭಕ್ತ ವಿರೋಧಿಗಳು ಮತ್ತು ನಾವು
ನಾವು ಮೊದಲು ಭಕ್ತರಿಂದ ಆರಂಭಿಸೋಣ. ಪ್ರಧಾನ ಮಂತ್ರಿ ದೇವರ ಅವತಾರ ಹಾಗೂ ಸರಕಾರ ಮಾಡಿದ್ದೆಲ್ಲವೂ (ಹಾಗೂ ಯಾವತ್ತು ಮಾಡುವುದೆಲ್ಲವೂ) 100% ಸರಿ. ನೀವು ಸರಕಾರವನ್ನು ವಿರೋಧಿಸಿದರೆಅವರು ನಿಮ್ಮನ್ನು ರಾಷ್ಟ್ರ ವಿರೋಧಿ, ಕಪ್ಪು ಹಣವನ್ನು ಕೂಡಿಟ್ಟುಕೊಂಡವರೆಂದು ಸಮಯಾನುಸಾರ ಹೇಳುತ್ತಾರೆ. ಸರಕಾರ ಸೆನ್ಸಾರ್ ಶಿಪ್ ವಿಧಿಸಿದರೆ ಹಾಗೂ ನೀವು ಅದನ್ನು ವಿರೋಧಿಸಿದರೆ ಅವರು ನಿಮ್ಮನ್ನು ಅತ್ಯಾಚಾರಿಯೆನ್ನುತ್ತಾರೆ. ಯಾವುದಾದರೂ ಅವ್ಯವಹಾರವನ್ನು ಅವರ ಗಮನಕ್ಕೆ ತಂದರೆ ಅವರು ಗಡಿಯಲ್ಲಿರುವ ಯೋಧನನ್ನು ಉಲ್ಲೇಖಿಸುತ್ತಾರೆ. ಇಲ್ಲಿ ತರ್ಕವಿಲ್ಲ, ಕೇವಲ ಕುರುಡು ವಿಧೇಯತೆಯಿದೆ. ಈ ಸರಕಾರ ಅಧಿಕಾರ ವಹಿಸಿಕೊಳ್ಳುವವರೆಗೆ ಯಾವುದೂ ಒಳ್ಳೆಯದು ನಡೆದಿರಲಿಲ್ಲ. ಹಾಗೂ ಹೌದು, ಫೋಟೋಶಾಪ್ = ವಾಸ್ತವ. ಅವರ ಪ್ರಕಾರ ನೀವು ಭಕ್ತರಲ್ಲದೇ ಇದ್ದರೆ, ನೀವೊಬ್ಬ ಭಕ್ತ ವಿರೋಧಿ.
ನಂತರ ಭಕ್ತ ವಿರೋಧಿಗಳಿರುತ್ತಾರೆ. ಅವರಿಗೆ ಈ ಸರಕಾರ ಯಾವುದೂ ಸರಿಯಾಗಿ ಮಾಡದು... ಯಾವತ್ತೂ. ಸರಕಾರ ಮಾಡುವುದೆಲ್ಲವೂ ಅದಾನಿ, ಅಂಬಾನಿಗಳಿಗಾಗಿ ಅಥವಾ ಜತೆಯಾಗಿ ಇಬ್ಬರಿಗೂ. ಎಲ್ಲಾ ನಿರ್ಧಾರಗಳನ್ನು ನಾಗ್ಪುರದಲ್ಲಿ ತೆಗೆದುಕೊಳ್ಳಲಾಗುತ್ತದೆ ಹಾಗೂ ಪ್ರತಿಯೊಂದು ನೀತಿಯೂ ಮನಮೋಹನೊಮಿಕ್ಸ್ ಇದರ ಹೊಸ ರೂಪದ ಆವೃತ್ತಿಯಾಗಿದೆ. ಜನರ ಮೇಲೆ ಅದರ ಪರಿಣಾಮ ಲೆಕ್ಕಿಸದೆಸರಕಾರದ ಪ್ರತಿಯೊಂದು ಉಪಕ್ರಮವೂವಿಫಲವಾಗಬೇಕೆಂದು ಅವರು ಬಯಸುತ್ತಾರೆ. ಯಾವುದನ್ನೇ ಆದರೂ ಜಾರಿಗೊಳಿಸುವ ಮುನ್ನವೇ ಹಿಂದಕ್ಕೆ ಪಡೆಯಲು ಅವರು ಆಗ್ರಹಿಸುತ್ತಾರೆ. ಒಳ್ಳೆಯದಾಗಿದ್ದೆಲ್ಲವೂ ಫೋಟೋಶಾಪ್ ಮಾಡಲ್ಪಟ್ಟಿದ್ದೆಂದೂಈ ಸರಕಾರವನ್ನು ನೀವು ಕೂದಲೆಳೆಯಷ್ಟು ಬೆಂಬಲಿಸಿದರೂ ನಿಮ್ಮನ್ನು ಭಕ್ತರೆಂದು ಅವರು ಕರೆಯುತ್ತಾರೆ.
ಇನ್ನು ನಾವು ಯಾವಾಗಲಾದರೊಮ್ಮೆ ಎರಡೂ ತುದಿಗಳತ್ತ ವಾಲುವನಮ್ಮ ಪ್ರವೃತ್ತಿಯನ್ನು ನಾವು ನಿಯಂತ್ರಿಸಿಕೊಳ್ಳಬೇಕು. ನಾವು ವಸ್ತುನಿಷ್ಠವಾಗಿರಲು ಪ್ರಯತ್ನಿಸೋಣ. ಪ್ರಶ್ನಿಸಿ, ಅಧ್ಯಯನ ನಡೆಸಿ, ಅರ್ಥ ಮಾಡಿಕೊಂಡು ಮಾಹಿತಿಯುಕ್ತ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾವೇಕೆ ಶ್ರಮಿಸಬಾರದು ?
ಸೈಫ್ ಸುಲ್ತಾನ್
ಸಾಮಾಜಿಕ ಕಾರ್ಯಕರ್ತ
ಮಂಗಳೂರು