ಝಾಕಿರ್ ನಾಯ್ಕ ಎನ್‌ಜಿಒಗೆ ಐದು ವರ್ಷಗಳ ನಿಷೇಧ

Update: 2016-11-15 16:09 GMT

ಹೊಸದಿಲ್ಲಿ,ನ.15: ಇಸ್ಲಾಮಿಕ್ ವಿದ್ವಾಂಸ್ ಝಾಕಿರ್ ನಾಯ್ಕಾ ಅವರ ಎನ್‌ಜಿಒ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್(ಐಆರ್‌ಎಫ್) ಅನ್ನು ಭಯೋತ್ಪಾದಕ ಚಟುವಟಿಕೆಗಳ ಆರೋಪದಲ್ಲಿ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ(ಯುಎಪಿಎ) ಯಡಿ ಐದು ವರ್ಷಗಳ ಅವಧಿಗೆ ನಿಷೇಧಿಸಲು ಮಂಗಳವಾರ ಕೇಂದ್ರ ಸರಕಾರವು ನಿರ್ಧರಿಸಿದೆ.
 ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಐಆರ್‌ಎಫ್ ಅನ್ನು ಯುಎಪಿಎ ಅಡಿ ಐದು ವರ್ಷಗಳ ಅವಧಿಗೆ ‘ಅಕ್ರಮ ಸಂಘಟನೆ ’ಯೆಂದು ಘೋಷಿಸಬೇಕೆಂಬ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು. ಗೃಹ ಸಚಿವಾಲಯವು ಈ ಬಗ್ಗೆ ಶೀಘ್ರವೇ ವಿಧ್ಯುಕ್ತ ಅಧಿಸೂಚನೆಯನ್ನು ಹೊರಡಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News