ಒತ್ತುವರಿಯಾಗಿದ್ದ ಅರಣ್ಯ ಭೂಮಿ ಮರುಸ್ವಾಧೀನ

Update: 2016-11-15 18:41 GMT

ಉಪ್ಪಿನಂಗಡಿ, ನ.15: ರಕ್ಷಿತಾರಣ್ಯದ ಭೂಮಿನ್ನು ಕಬಳಿಸಿ ಕೃಷಿಗೆ ಬಳಸುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯಭೂಮಿಯನ್ನು ಮರು ಸ್ವಾಧೀನಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ನಡೆದಿದೆ. ಶಿಬಾಜೆ ಗ್ರಾಮದ ಪಡಂತಾಜೆ ಎಂಬಲ್ಲಿ ಕೆಟಿ ಜಾರ್ಜ್ ಎಂಬಾತ ರಕ್ಷಿತಾರಣ್ಯಕ್ಕೆ ಸೇರಿದ ಭೂಮಿಯನ್ನು ಹಿಟಾಚಿ ಬಳಸಿ ಕೃಷಿ ಚಟುವಟಿಕೆಗೆ ಬಳಸಲು ಮುಂದಾಗಿರುವುದನ್ನು ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಈ ಬಗ್ಗೆ ಕೂಡಲೇ ಜಾಗೃತರಾದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಸಂಧ್ಯಾ ಮತ್ತವರ ತಂಡ ದಾಳಿ ನಡೆಸಿ ರಕ್ಷಿತಾರಣ್ಯವನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಮರು ಸ್ವಾಧೀನ ಪಡಿಸಿದರು. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News