×
Ad

ಮೋದಿ ಘೋಷಣೆ ಸುತ್ತ ಮಾಹಿತಿ ಸೋರಿಕೆ ವದಂತಿಗಳ ಹುತ್ತ

Update: 2016-11-16 00:24 IST

ಪ್ರಧಾನಿ ನರೇಂದ್ರ ಮೋದಿ, 500 ಮತ್ತು 1000 ರೂಪಾಯಿ ನೋಟಗಳನ್ನು ಚಲಾವಣೆಯಿಂದ ರದ್ದುಮಾಡುವ ನಿರ್ಧಾರ ಪ್ರಕಟಿಸುವ ಒಂದು ತಿಂಗಳು ಮುನ್ನವೇ ಅಂದರೆ ಸೆಪ್ಟಂಬರ್‌ನಲ್ಲೇ ಹಲವು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಒಂದು ಕುಚೋದ್ಯದ ಫೋಟೊ ಹರಿದಾಡುತ್ತಿತ್ತು. ತಿಳಿಗುಲಾಬಿ ಬಣ್ಣದ 2000 ರೂಪಾಯಿ ನೋಟು ಹಾಗೂ ಬಿಳಿಯ ಪ್ಲಾಸ್ಟಿಕ್ ಟೇಪ್ ಹಿಡಿದ ಚಿತ್ರ ಅದಾಗಿತ್ತು.

ಉದ್ಯಮಿಗಳು, ಅರ್ಥಶಾಸ್ತ್ರಜ್ಞರು, ತೆರಿಗೆ ತಜ್ಞರು ಮತ್ತಿತರರನ್ನು ಸಂದರ್ಶಿಸಿ ಹೊಸ 2000 ರೂಪಾಯಿ ನೋಟಿನ ಫೋಟೊ ಬಗ್ಗೆ ಕೇಳಿದಾಗ, ಆದಾಯ ಘೊಷಣೆ ಯೋಜನೆ ಮುಗಿದ ಬಳಿಕ, ಅಧಿಕ ಮೌಲ್ಯದ ನೋಟುಗಳ ಚಲಾವಣೆಯನ್ನು ರದ್ದು ಮಾಡುವುದರ ಬಗೆಗಿನ ಸ್ಪಷ್ಟ ಸಂಕೇತ ಇದೀಗ ಗೋಚರಿಸುತ್ತಿದೆ ಎಂಬ ವಿಶ್ಲೇಷಣೆ ಮಾಡಿದ್ದರು.
‘ದ ಕ್ವಿಂಟ್’ ಸಂದರ್ಶಿಸಿದ ಈ ಗುಂಪಿನ ಸದಸ್ಯರ ಪ್ರಕಾರ, ಈ ಚಿತ್ರಗಳು ಆರಂಭಿಕ ಹಂತದಲ್ಲಿ ಕೇವಲ ಶ್ರೀಮಂತ ಹಾಗೂ ರಾಜಕೀಯ ಸಂಪರ್ಕ ಹೊಂದಿರುವ ಉದ್ಯಮಿಗಳು ಮತ್ತು ಅವರ ಸ್ನೇಹಿತರ ವಲಯದಲ್ಲಷ್ಟೇ ಹರಿದಾಡುತ್ತಿತ್ತು. ಆದರೆ ಅಕ್ಟೋಬರ್‌ನಲ್ಲಿ ಇದು ಇತರ ಸಾಮಾಜಿಕ ಜಾಲತಾಣಕ್ಕೂ ಹಬ್ಬಿತು. ಆದರೆ ನವೆಂಬರ್ 6ರಂದು ಇದು ಟ್ವಿಟರ್‌ನಲ್ಲಿ ವೈರಲ್ ಆಯಿತು. ಈ ವೇಳೆಗೆ ಕಾಳ ಆರ್ಥಿಕತೆಯ ಮತಿವಿಕಲ್ಪವಿಕೋಪದ ಸ್ಥಿತಿಗೆ ಹೋಗಿತ್ತು.
ಇದಾಗಿ ಎರಡು ದಿನಗಳಲ್ಲಿ ಮೋದಿ ಈ ಘೋಷಣೆ ಮಾಡಿದರು. ಈ ದಿಢೀರ್ ಘೋಷಣೆಗೆ ಮುನ್ನ ಹಲವು ತಿಂಗಳುಗಳ ಕಾಲ ಈ ರಹಸ್ಯ ಕಾಪಾಡಿಕೊಂಡು ಬರಲಾಗಿತ್ತು ಎಂದು ಸರಕಾರ ಬೆನ್ನು ತಟ್ಟಿಕೊಂಡಿತ್ತು.
‘‘ಈ ಚಲಾವಣೆ ರದ್ದತಿ ನಿರ್ಧಾರವನ್ನು ಶಕ್ತಿಕೇಂದ್ರವಾದ ರಾಜಧಾನಿಯಲ್ಲಿ ಕೂಡಾ ಅತ್ಯಂತ ರಹಸ್ಯವಾಗಿ ಉಳಿಸಿಕೊಳ್ಳಲಾಗಿತ್ತು. ಈ ನಡೆಯ ಬಗ್ಗೆ ಬೆರಳೆಣಿಕೆಯ ಅತ್ಯುನ್ನತ ಅಧಿಕಾರಿಗಳಿಗಷ್ಟೇ ಸುಳಿವು ಇತ್ತು’’ ಎಂದು ಟೈಮ್ಸ್ ಆಫ್ ಇಂಡಿಯಾದ ನವೆಂಬರ್ 10ರ ಸಂಚಿಕೆ ವರದಿ ಮಾಡಿತ್ತು. ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುವ ಕೆಲವೇ ನಿಮಿಷಗಳ ಮೊದಲಷ್ಟೇ ಸಂಪುಟ ಸಚಿವರಿಗೂ ಇದನ್ನು ಬಹಿರಂಗಪಡಿಸಲಾಗಿತ್ತು ಎಂದು ವರದಿ ಬಣ್ಣಿಸಿತ್ತು. ಈ ಅಚ್ಚರಿ ನಡೆಯ ಮೂಲಕ ಶ್ರೀಮಂತ ಹಾಗೂ ಭ್ರಷ್ಟ ಕುಳಗಳನ್ನು ಹಿಡಿಯುವ ಸಲುವಾಗಿ, ದೇಶದ ಲಕ್ಷಾಂತರ ಮಂದಿ ನಾಗರಿಕರು ಸ್ವಲ್ಪಮಟ್ಟಿಗೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸರಕಾರಿ ವಕ್ತಾರರು ಹೇಳಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಫೋಟೊ ಬಗ್ಗೆ ಪ್ರತಿಕ್ರಿಯಿಸಲು ಆರ್‌ಬಿಐ ಅಧಿಕಾರಿಗಳು ನಿರಾಕರಿಸಿದ್ದರು. ಅಂತೆಯೇ ಹಣಕಾಸು ಸಚಿವರ ಕಚೇರಿಯಿಂದ ಪ್ರತಿಕ್ರಿಯೆ ಪಡೆಯುವ ಯತ್ನವೂ ಸಫಲವಾಗಿರಲಿಲ್ಲ.
ಈ ನಿರ್ಧಾರ ಪ್ರಕಟವಾಗುವ ಕೆಲ ದಿನಗಳ ಮುನ್ನ, 1999ರ ವಾಜಪೇಯಿ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ ಅವರಿಗೆ ಆರ್ಥಿಕ ಸಲಹೆಗಾರರಾಗಿದ್ದ ಅರ್ಥಶಾಸ್ತ್ರಜ್ಞ ಮೋಹನ್ ಗುರುಸ್ವಾಮಿ ಅವರಿಗೆ ಒಂದು ಅನಿರೀಕ್ಷಿತ ಕರೆ ಬಂತು.
‘‘ಈ ವಾರ ನೋಟುಗಳ ಚಲಾವಣೆ ರದ್ದತಿಯಾಗುತ್ತದೆ ಎನ್ನುವುದು ಕೇಳಿಬರುತ್ತಿದೆ. ಈ ಬಗ್ಗೆ ನಿಮ್ಮ ಮಾಹಿತಿ ಏನು?’’ ಎಂದು ದೂರವಾಣಿಯಲ್ಲಿ ಅವರ ಸ್ನೇಹಿತರೊಬ್ಬರು ಪ್ರಶ್ನಿಸಿದರು. ತಾನು ಶಿರಡಿಗೆ ತೀರ್ಥಯಾತ್ರೆ ಹೋಗಲು ನಿರ್ಧರಿಸಿದ್ದು, ಅಘೋಷಿತ ನಗದು ಸಂಗ್ರಹವೇ ದೊಡ್ಡ ಆತಂಕದ ವಿಚಾರ ಎಂದು ಹೇಳಿದ್ದರು. ಆಗ ಗುರುಸ್ವಾಮಿ, ನೀವು ಧಾರಾಳವಾಗಿ ತೀರ್ಥಯಾತ್ರೆ ಮುಗಿಸಿಕೊಂಡು ಬರಬಹುದು ಎಂದು ಸಲಹೆ ಮಾಡಿದರು. ಆ ಬಳಿಕ ಆ ಸ್ನೇಹಿತ ಕರೆ ಮಾಡಲಿಲ್ಲ.
ಈ ಕರೆ ಬರುವ ಎರಡು ವಾರ ಮುನ್ನ ಇನ್ನೊಬ್ಬರು ನಿಕಟವರ್ತಿ, ಹಿರಿಯ ಲೆಕ್ಕಪರಿಶೋಧಕ ಕರೆ ಮಾಡಿ, ಈ ವರ್ಷದ ಡಿಸೆಂಬರ್ ಒಳಗಾಗಿ ರೂಪಾಯಿ ಚಲಾವಣೆ ರದ್ದತಿಯನ್ನು ನಿರೀಕ್ಷಿಸಬಹುದು ಎಂದು ಹೇಳಿದ್ದರು.
ಆದರೆ ತೀರಾ ರಹಸ್ಯವಾಗಿ ಮುದ್ರಣಗೊಂಡಿದ್ದ 2000 ರೂಪಾಯಿ ನೋಟುಗಳು ಸಾಮಾಜಿಕ ಜಾಲತಾಣಕ್ಕೆ ಹೇಗೆ ಸೋರಿಕೆಯಾಯಿತು ಎನ್ನುವುದು ಪ್ರಶ್ನೆ. 2000 ರೂಪಾಯಿಯ ನೋಟು ಮುದ್ರಣಗೊಂಡು, ಹಂಚಿಕೆಗೆ ಸಿದ್ಧವಾಗಿದೆ ಎಂದು ತಿಳಿದ ಬಳಿಕ ಒಬ್ಬ ಉದ್ಯಮಿಗೆ ಇನ್ನೇನು ತಿಳಿಯಬೇಕು?
ಪ್ರತಿಯೊಬ್ಬರಿಗೂ ತಿಳಿದಿದ್ದು, ತಪ್ಪಿಸಿಕೊಂಡಿದ್ದಾರೆ ಎಂದೇನಲ್ಲ. ಆದರೆ ದೊಡ್ಡ ಹಕ್ಕಿಗಳೆಲ್ಲ ಹಾರಿ ಹೋಗಿವೆ.
ಕಪ್ಪುಹಣ ಭಾರತದಲ್ಲಿ ಇದ್ದುದು ಅಪರೂಪ. ಪ್ರತಿ ವರ್ಷ 51 ಶತಕೋಟಿ ಡಾಲರ್‌ನಷ್ಟು ಹಣ 2004ರಿಂದ 2013ರವರೆಗೆ ಅಕ್ರಮವಾಗಿ ಭಾರತದಿಂದ ಹೊರಗೆ ವರ್ಗಾವಣೆಯಾಗಿವೆ ಎಂದು ಹೇಳಲಾಗುತ್ತಿದೆ. ಆದರೆ ದೇಶದ ಆರ್ಥಿಕತೆಯಲ್ಲಿ ಯಾವುದೇ ವ್ಯತ್ಯಯಕ್ಕೆ ಕಾರಣವಾಗದ ಈ ಹಣದ ವಿವರಣೆಯನ್ನು ನಂಬಬೇಕೇ ಎನ್ನುವುದು ಪ್ರಶ್ನೆ ಎಂದು ಗುರುಸ್ವಾಮಿ ಹೇಳುತ್ತಾರೆ.
ದ ಕ್ವಿಂಟ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಅಧಿಕ ನಗದು ವಲಯದಲ್ಲಿ ಸಕ್ರಿಯವಾಗಿರುವ ಒಬ್ಬರು ಉದ್ಯಮಿ ಹೇಳಿದಂತೆ, ‘‘ತಪ್ಪಿಸಲು ಅಸಾಧ್ಯ ವಾದ ಚಲಾವಣೆ ರದ್ದತಿ ಬಗ್ಗೆ ಸರಕಾರದ ಮೂಲದಿಂದ ಎಚ್ಚರಿಕೆ ಸಿಕ್ಕಿತ್ತು. ಆ ಬಳಿಕ ನನಗೆ 2000 ರೂಪಾಯಿ ನೋಟಿನ ಚಿತ್ರ ಲಭಿಸಿತು. ಇದರಿಂದ ಏನು ಆಗಬಹುದು ಎನ್ನುವುದು ಅರಿವಾಯಿತು. ಇದರಿಂದಾಗಿ ಸಹಜವಾಗಿಯೇ ದೊಡ್ಡ ಮೌಲ್ಯದ ನೋಟುಗಳನ್ನು ಕಡಿಮೆ ಮೌಲ್ಯದ ನೋಟುಗಳಿಗೆ ಬದಲಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ಸಿಕ್ಕಿತು’’
ಮಾರುಕಟ್ಟೆಯ ಚಲನ ವಲನಗಳ ಬಗ್ಗೆ ನಿಗಾ ಇರಿಸಿಕೊಂಡಿದ್ದವರಿಗೆ, ಇಂಥ ವಿಷಯ ಸೋರಿಕೆಯಾಗುವುದು ಅಗತ್ಯವಿರಲಿಲ್ಲ ಎಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಹಲವು ಉದ್ಯಮಿಗಳು ಅಭಿಪ್ರಾಯಪಟ್ಟಿದ್ದರು. ಹಲವು ಇಂಥ ಮಾಹಿತಿಗಳ ಸುಳಿವು ಪತ್ರಿಕೆಯಲ್ಲಿ ಸಿಕ್ಕಿತ್ತು. ಈ ವರ್ಷದ ಜನವರಿಯಲ್ಲಿ, ‘ದ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ‘‘ಪ್ರಮಾದವಶಾತ್ 1000 ರೂಪಾಯಿಯ ಹತ್ತು ಕೋಟಿ ನೋಟುಗಳು ಚಲಾವಣೆಗೆ ಬಿಡುಗಡೆಯಾಗಿವೆ. ಈ ಬಗ್ಗೆ ಆರ್‌ಬಿಐ ತೀವ್ರ ಆತಂಕ ವ್ಯಕ್ತಪಡಿಸಿದೆ’’. ಇದಾದ ಬಳಿಕ ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಇನ್ನೊಂದು ವರದಿ ಮಾಡಿ, ‘‘ಆರ್‌ಬಿಐ ಈಗಾಗಲೇ ಹೊಸ 1000 ರೂಪಾಯಿ ನೋಟು ತರುವ ಬಗ್ಗೆ ಚಿಂತನೆ ನಡೆಸಿದ್ದು, ಇದರಲ್ಲಿ ಸಾಕಷ್ಟು ಹೆಚ್ಚುವರಿ ಭದ್ರತಾ ಅಂಶಗಳನ್ನು ಸೇರಿಸಿಕೊಳ್ಳಲಾಗಿದೆ’’ ಎಂದು ವಿವರಿಸಿತ್ತು.
ಈ ವರ್ಷ ಪತ್ರಿಕೆಗಳಲ್ಲಿ ಹೊಸ 1000 ರೂಪಾಯಿ ನೋಟು ಮಾರುಕಟ್ಟೆಗೆ ಬಿಡುಗಡೆ ಮಾಡುವ ಹಾಗೂ 2000 ರೂಪಾಯಿಯ ಹೊಸ ನೋಟು ಬಿಡುಗಡೆಯಾಗುವ ಮಾಹಿತಿಯ ಸುಳಿವು ಸಿಕ್ಕಿತ್ತು. ಮೋದಿ ಈ ಘೋಷಣೆ ಮಾಡುವ 16 ದಿನ ಮುಂಚಿತವಾಗಿ ಬ್ಯುಸಿನೆಸ್ ಲೈನ್ ಪತ್ರಿಕೆಯಲ್ಲಿ, 2000 ರೂಪಾಯಿಯ ಮೊದಲ ಕಂತು ಮುದ್ರಣ ಮೈಸೂರಿನ ನೋಟು ಮುದ್ರಣಾಲಯದಲ್ಲಿ ಸಿದ್ಧವಾಗಿದ್ದು, ಚಲಾವಣೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ ಎಂದು ವರದಿ ಪ್ರಕಟವಾಗಿತ್ತು.
ನಿರ್ದಿಷ್ಟವಾಗಿ ವರದಿಯಲ್ಲಿ ಈ ಸಾಲುಗಳು ಪ್ರಕಟವಾಗಿದ್ದವು. ಕಪ್ಪುಹಣ ದಾಸ್ತಾನು ಹಿಡಿಯುವ ಸಲುವಾಗಿ 1000 ಮತ್ತು 500 ರೂಪಾಯಿ ನೋಟುಗಳ ಚಲಾವಣೆಯನ್ನು ರದ್ದು ಮಾಡಬೇಕು ಎಂಬ ಬೇಡಿಕೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ನಡೆ ಮಹತ್ವದ್ದಾಗಿದೆ.

(ಕೃಪೆ: thequint.com) 

Writer - ಅಮನ್ ಸೇಥಿ

contributor

Editor - ಅಮನ್ ಸೇಥಿ

contributor

Similar News