ಆಕಾಶವಾಣಿಯಲ್ಲಿ ‘ನುಡಿಸಿರಿ’ ನೇರಪ್ರಸಾರ

Update: 2016-11-16 18:33 GMT

ಮಂಗಳೂರು, ನ.16: ಮೂಡುಬಿದಿರೆಯಲ್ಲಿ ನ.18ರಿಂದ 20ರವರೆಗೆ ನಡೆಯಲಿರುವ ‘ಆಳ್ವಾಸ್ ನುಡಿಸಿರಿ-2016’ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಪ್ಟ್ರೀಯ ಸಮ್ಮೇಳನದ ಕಾರ್ಯಕಲಾಪಗಳನ್ನು ಆಕಾಶವಾಣಿ ಮಂಗಳೂರು ಕೇಂದ್ರವು ನೇರಪ್ರಸಾರ ಮಾಡಲಿದೆ.

ನ.18ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮತ್ತು ಅಪರಾಹ್ನ 2:35ರಿಂದ ಸಂಜೆ 6ರವರೆಗೆ ಉದ್ಘಾಟನೆ ಹಾಗೂ ವಿವಿಧ ಗೋಪ್ಠಿ ಮತ್ತು ವಿವಿಧ ವೇದಿಕೆಗಳ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡಲಿದೆ. ನ.19ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ, ಅಪರಾಹ್ನ 2:35ರಿಂದ ಸಂಜೆ 6ರವರೆಗೆ ಹಾಗೂ ನ.20ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ, ಅಪರಾಹ್ನ 2:35ರಿಂದ ಸಂಜೆ 6ರವರೆಗೆ ಕಾರ್ಯಕಲಾಪಗಳನ್ನು ನೇರಪ್ರಸಾರ ಮಾಡಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News