×
Ad

ಹಳೆ ನೋಟು ಬದಲಾವಣೆ, ಬ್ಯಾಂಕಿನಿಂದ ಹಣ ತೆಗೆಯುವ ಬಗ್ಗೆ ಸರಕಾರ ಹೊಸ ಘೋಷಣೆ

Update: 2016-11-17 11:03 IST

ಹೊಸದಿಲ್ಲಿ, ನ. 17 : ನೋಟು ರದ್ದತಿ ಬಳಿಕದ ಪರಿಣಾಮಗಳನ್ನು ಎದುರಿಸಲು ಸರಕಾರ ಗುರುವಾರ ಮತ್ತೆ ಕೆಲವು ಘೋಷಣೆಗಳನ್ನು ಮಾಡಿದೆ. ಇದರಲ್ಲಿ ಕೆಲವು ಜನರಿಗೆ ಖುಷಿ ಕೊಟ್ಟರೆ , ಸಂಕಟ ತರುವ ವಿಷಯವೂ ಇದೆ.ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಈ ಬಗ್ಗೆ ಪ್ರಕಟಣೆ ನೀಡಿದ್ದಾರೆ.   ಮುಖ್ಯಾಂಶಗಳು ಇಲ್ಲಿವೆ : 

ಕೆವೈಸಿ (ನೊ ಯುವರ್ ಕಸ್ಟಮರ್ ) ಆಗಿರುವ ಖಾತೆಗಳಿಂದ ಮದುವೆ ಖರ್ಚಿಗೆ 2.50 ಲಕ್ಷ ರೂ. ತೆಗೆಯಬಹುದು. 

ನೋಂದಾಯಿತ ವ್ಯಾಪಾರಿಗಳು ಬ್ಯಾಂಕಿನಿಂದ  ವಾರಕ್ಕೆ 50,000 ರೂ. ತೆಗೆಯಬಹುದು. 

ಬೆಳೆ ಸಾಲದ ಮೇಲೆ ರೈತರು  ವಾರಕ್ಕೆ 25,000 ರೂ. ತೆಗೆಯಬಹುದು. 

ಬೆಳೆ ವಿಮೆಯ ಪ್ರೀಮಿಯಂ ಕಟ್ಟಲು 15 ದಿನ ಗಡು ವಿಸ್ತರಣೆ 

ನಾಳೆಯಿಂದ ( ನವೆಂಬರ್ 18) ಬ್ಯಾಂಕಿನಲ್ಲಿ ಹಳೆಯ 500, 1000 ರೂ. ಬದಲಾವಣೆಗೆ 4,500 ರೂ. ಮಿತಿಯನ್ನು 2000 ರೂ. ಗೆ ಇಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News