ನಾಳೆಯಿಂದ ಬ್ಯಾಂಕ್ ಗಳಲ್ಲಿ ಹಳೆಯ ನೋಟುಗಳ ಬದಲಾವಣೆ 4,500 ರೂ.ಗಳಿಂದ 2,000 ರೂ.ಗೆ ಇಳಿಕೆ

Update: 2016-11-17 06:47 GMT

ಹೊಸದಿಲ್ಲಿ, ನ.17: 500 ಮತ್ತು 1000 ರೂ. ಮುಖ ಬೆಲೆಯ ಹಳೆಯ ನೋಟುಗಳ ಬದಲಾವಣೆ ಮಾಡುವವರಿಗೆ ಇನ್ನೊಂದು ಆಘಾತ ಕಾದಿದ್ದು, ಶುಕ್ರವಾರದಿಂದ  ಬ್ಯಾಂಕ್ ಗಳಲ್ಲಿ ನೋಟು ಬದಲಾವಣೆಯನ್ನು 2,000 ರೂಗಳಿಗೆ ಸೀಮಿತಗೊಳಿಸಲಾಗಿದೆ ಎಂದು  ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಇಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರತಿದಿನ 4,500 ರೂ.ಗಳ ತನಕ   ಬ್ಯಾಂಕ್ ಗಳಲ್ಲಿ ನೋಟು ಬದಲಾವಣೆಗೆ ಅವಕಾಶ  ಇತ್ತು. ಸರಕಾರ ಈ ವಿಚಾರದಲ್ಲಿ ಕಟ್ಟು ನಿಟ್ಟಿನ ನಿರ್ಧಾರ ಕೈಗೊಂಡಿದೆ.

ಸರಕಾರ ಕೈಗೊಂಡಿರುವ ಪ್ರಮುಖ ನಿರ್ಧಾರಗಳ ಹೈಲೈಟ್ಸ್

*ಮದುವೆ ಉದ್ದೇಶಕ್ಕಾಗಿ ಕುಟುಂಬದ ಸದಸ್ಯನೊಬ್ಬನಿಗೆ  (ವರ ಅಥವಾ ವದು, ತಂದೆ ಅಥವಾ ತಾಯಿ) ಗರಿಷ್ಠ 2.50 ಲಕ್ಷ ರೂ. ಹಿಂಪಡೆಯಲು (ವಿಥ್ ಡ್ರಾ) ಅವಕಾಶ ಕಲ್ಪಿಸಲಾಗಿದೆ. ಆದರೆ ಈ ರೀತಿ ವಿತ್ ಡ್ರಾ ಮಾಡುವಾಗ ಹಣವನ್ನು ಕುಟುಂಬದ ಪರವಾಗಿ ಮದುವೆ ಉದ್ದೇಶಕ್ಕಾಗಿ ಖಾತೆಯಿಂದ ಹಿಂಪಡಯುತ್ತಿರುವುದಾಗಿ ಸ್ವಯಂ ಘೋಷಿಸಬೇಕು.

*ವರ್ತಕರಿಗೆ ವಾರಕ್ಕೆ 50,000 ರೂ. ಹಿಂಪಡೆಯಲು ಅವಕಾಶ.

*ಕೃಷಿಕರು ,ರೈತರಿಗೆ ಮಂಜೂರಾಗಿರುವ ಕೃಷಿ ಸಾಲದಲ್ಲಿ ವಾರಕ್ಕೆ 25,000 ರೂ. ಹಿಂಪಡೆಯಲು ಅವಕಾಶ. ಆದರೆ ಹಣ ವಿತ್ ಡ್ರಾ ಮಾಡುವ ಖಾತೆ ರೈತನ ಹೆಸರಿನಲ್ಲಿರಬೇಕು 

*ಬೆಳೆ ಸಾಲ ಪ್ರೀಮಿಯಂ ಪಾವತಿ ಅವಧಿ 15 ದಿನಗಳ ವಿಸ್ತರಣೆ.

* 500 ರೂ. ಮತ್ತು 1,000 ರೂ . ನೋಟುಗಳ ಬದಲಾವಣೆ ಪ್ರತಿದಿನ 4,500 ಸಾವಿರ ರೂ. ಗಳಿಗೆ ಅವಕಾಶ ಇತ್ತು. ಇದೀಗ ನೋಟುಗಳ ಬದಾವಣೆ ಮಿತಿಯನ್ನು ಕಡಿತಗೊಳಿಸಲಾಗಿದೆ. 4,500 ಸಾವಿರ ರೂ.ಗಳಿಂದ 2,000 ರೂ.ಗಳಿಗೆ ಸೀಮಿತಗೊಳಿಸಲಾಗಿದೆ. ನ.18ರಿಂದ ಬ್ಯಾಂಕ್ ಗಳಲ್ಲಿ 2 ಸಾವಿರ ರೂ.ಗಳನ್ನು ಬದಲಾಯಿಸಲು ಅವಕಾಶ  ಇದೆ.

*ಕೇಂದ್ರ ಸರಕಾರದ ನೌಕರರು ಗ್ರೂಪ್ 'ಸಿ' ತನಕ  ನವೆಂಬರ್ ಸಂಬಳದಿಂದ ಮುಂಗಡ  ವೇತನದ ಬಗ್ಗೆ ವಿಥ್ ಡ್ರಾ ಮಿತಿ 10,000 ರೂ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News