ನೋಟಿನ ಕೊರತೆ : ಅಸ್ಸಾಂ ನಲ್ಲಿ ವಿದೇಶಿ ನೋಟುಗಳ ಚಲಾವಣೆ !

Update: 2016-11-17 05:56 GMT

ಗುವಾಹಟಿ,ನ.17 :ಸಾಕಷ್ಟು ನೋಟುಗಳ ಕೊರತೆಯಿಂದಾಗಿ ಅಸ್ಸಾಂ ರಾಜ್ಯದ ಕೆಲವೆಡೆ ಜನರು ಭೂತಾನ್ ನೋಟುಗಳನ್ನು ಚಲಾಯಿಸುತ್ತಿದ್ದಾರೆಂಬಬಗ್ಗೆ ಕೆಲ ಟೆಲಿವಿಷನ್ ಚಾನಲ್ಲುಗಳು ಸುದ್ದಿ ಪ್ರಸಾರ ಮಾಡಿವೆ.

ಭೂತಾನ್ ಗಡಿಯ ಸಮೀಪವಿರುವ ಕೊಕ್ರಝರ್ ಜಿಲ್ಲೆಯಲ್ಲಿ ಜನರು ಭೂತಾನ್ ನೋಟುಗಳನ್ನು ಖರೀದಿಗಾಗಿ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಕೆಲವೊಮ್ಮೆ ಭೂತಾನ್ ನೋಟುಗಳನ್ನು ಉಪಯೋಗಿಸುವುದು ಈ ಹಿಂದೆಯೂ ಸಾಮಾನ್ಯವಾಗಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಉಪಯೋಗಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಇದೀಗ ದೊರೆತ ಮಾಹಿತಿಯಂತೆ ರದ್ದುಗೊಂಡಿರುವ 500 ಹಾಗೂ 1000 ನೋಟುಗಳ ಬದಲಿಗೆ ಭೂತಾನ್ ನೋಟುಗಳನ್ನು ಇಲ್ಲಿಯ ಜನರು ಪಡೆಯುತ್ತಿದ್ದಾರೆ.

ವರದಿಗಳ ಪ್ರಕಾರ ರದ್ದಾಗಿರುವ 500 ರೂ. ನೋಟಿನ ಬದಲಿಗೆ 400 ರೂ, ಮೌಲ್ಯದ ಭೂತಾನ್ ನೋಟುಗಳನ್ನು ನೀಡಲಾಗುತ್ತಿದೆ. ಆದರೆ ನೋಟು ರದ್ದತಿಗಿಂತ ಮುಂಚೆ 500 ರೂಪಾಯಿ ಮೌಲ್ಯದ ಭೂತಾನ್ ನೋಟನ್ನು 400 ರೂಪಾಯಿಗೆ ವಿನಿಮಯ ಮಾಡಲಾಗುತ್ತಿತ್ತು.

ಸ್ಥಳೀಯ ಜನರ ಪ್ರಕಾರ ಅವರ ಹತ್ತಿರದ ಬ್ಯಾಂಕು ಹಾಗೂ ಎಟಿಎಂ ಗಳೂ ಸುಮಾರು50ರಿಂದ 60 ಕಿಮೀ ದೂರವಿದೆ. ಕೆಟ್ಟ ರಸ್ತೆಗಳು ಹಾಗೂ ಅಷ್ಟು ದೂರ ಹೋದರೂ ಹಳೆಯ ನೋಟುಗಳ ಬದಲಿಗೆ ಹೊಸ ನೋಟುಗಳು ಉದ್ದ ಸರತಿಯಲ್ಲಿ ನಿಂತು ದೊರೆಯುವ ಬಗ್ಗೆಸಂಶಯವಿರುವುದರಿಂದಅವರು ಇದೀಗ ಭೂತಾನ್ ನೋಟುಗಳ ಮೊರೆ ಹೋಗಿದ್ದಾರೆ.

ಸರಕಾರ ಸಂಚಾರಿ ಎಟಿಎಂ ಅನ್ನು ತಮ್ಮ ಗ್ರಾಮಗಳಿಗೆ ತಂದರೆ ಮಾತ್ರ ತಮಗೆ ಉಪಕಾರವಾಗುವುದು ಎಂದು ಗ್ರಾಮಸ್ಥರುಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News