ಕಾರು ಜಲಾಶಯಕ್ಕೆ: 5 ಮಂದಿ ನಾಪತ್ತೆ

Update: 2016-11-17 06:33 GMT

ಅರೂರ್, ನವೆಂಬರ್ 17: ರಾಷ್ಟ್ರೀಯ ಹೆದ್ದಾರಿ ಅರೂರ್-ಕುಂಬಳೆ ಸೇತುವೆ ಬಳಿ ಬೊಲೆರೊ ವಾಹನ ಜಲಾಶಯಕ್ಕೆ ಮಗುಚಿಬಿದ್ದ ಪರಿಣಾಮ ಐದು ಮಂದಿ ಕಾಣೆಯಾಗಿದ್ದಾರೆ. ನಾಲ್ವರನ್ನು ಬೆಸ್ತರು ರಕ್ಷಿಸಿದ್ದಾರೆ. ಕಾಣೆಯಾದವರಲ್ಲಿ ಬೊಲೆರೊ ಚಾಲಕ ವಡುದಲದ ನಿಜಾಸ್, ಉಳಿದವರೆಲ್ಲರೂ ನೇಪಾಲದವರು ಎಂದು ವರದಿಯಾಗಿದೆ.

ಅಪಘಾತದಲ್ಲಿ ಲೋಕ್‌ಮಾನ್, ಪದಂಬದರ್, ಸುರೇಶ್, ರಾಮು ಎಂಬವರು ಪಾರಾಗಿದ್ದು ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬುಧವಾರ ಸಂಜೆ 6:45ಕ್ಕೆ ನಾಡಿಡೀ ಕಂಪಿಸುವಂತಾದ ದುರಂತ ಸಂಭವಿಸಿತ್ತು. ಬೊಲೆರೊದಲ್ಲಿದ್ದವರು ಎರ್ನಾಕುಲಂ ಬೊಲ್‌ಗಾಟ್‌ನಲ್ಲಿಚಪ್ಪರ ನಿರ್ಮಾಣ ಕಾರ್ಯ ಮುಗಿಸಿ ವಾಸಸ್ಥಳವಾದ ಚೆರ್ತಲದ ಪಾಣಾವಳ್ಳಿಗೆ ಮರಳುತ್ತಿದ್ದರು. ಸೇತುವೆಗೆ ಢಿಕ್ಕಿ ಹೊಡೆದು ವಾಹನ ಜಲಾಶಯಕ್ಕೆ ಬಿದ್ದಿದೆ. ಬೊಲೆರೊದ ಹಿಂದಿನಿಂದ ಬಂದ ವಾಹನದ ಪ್ರಯಾಣಿಕರು ಜಲಾಶಯದ ಹತ್ತಿರ ಹೋಗಿ ನೋಡಿದರೂ ಬೊಲೆರೊ ಕಾಣಿಸಿರಲಿಲ್ಲ. ಸಮುದ್ರದ ಏರಿಳಿತ ಸಮಯವಾದ್ದರಿಂದ ಪಶ್ಚಿಮಭಾಗಕ್ಕೆ ಹೆಚ್ಚಿನ ನೀರಿನ ಸೆಳೆತ ಇತ್ತು ಎನ್ನಲಾಗಿದೆ.

ಜಲಾಶಯಕ್ಕೆ ವಾಹನ ಬಿದ್ದುದನ್ನು ನೋಡಿದ ಮೀನುಗಾರರಾದ ವಾಸುಮತ್ತು ಪ್ರಜೀಷ್ ನಾಲ್ಕುಮಂದಿಯನ್ನು ರಕ್ಷಿಸಿದ್ದಾರೆ. ಉಳಿದ ಐದು ಮಂದಿ ಕಾಣೆಯಾಗಿದ್ದಾರೆ. ಅತಿವೇಗ ಅಪಘಾತಕ್ಕೆ ಕಾರಣವೆನ್ನಲಾಗಿದ್ದು. ಬೊಲೆರೊದ ಹಿಂಭಾಗಕ್ಕೆ ಟಿಪ್ಪರ್ ಢಿಕ್ಕಿಹೊಡೆದ್ದದರಿಂದ ಬೊಲೆರೊ ಜಲಾಶಯಕ್ಕೆ ಬಿತ್ತು ಎಂದು ಸ್ಥಳೀಯರು ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News