×
Ad

ಲೋಕಸಭೆಯ ಕಲಾಪ ನಾಳೆಗೆ ಮುಂದೂಡಿಕೆ

Update: 2016-11-17 13:20 IST

ಹೊಸದಿಲ್ಲಿ, ನ.17: ಐನೂರು ಮತ್ತು ಸಾವಿರ ನೋಟ್‌ ನಿ಼ಷೇಧವನ್ನು ವಿರೋಧಿಸಿ ವಿಪಕ್ಷ ಸದಸ್ಯರು ಲೋಕಸಭೆಯಲ್ಲಿ ಗದ್ದಲವನ್ನುಂಟು ಮಾಡಿದ ಪರಿಣಾಮವಾಗಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ. 
ಇದರೊಂದಿಗೆ ಚಳಿಗಾಲ ಅಧಿವೇಶನದ ಎರಡನೆ ದಿನವೂ ಕಲಾಪ ವ್ಯರ್ಥಗೊಂಡಿದೆ. 
ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಕಲಾಪವನ್ನು ನಾಳೆಗೆ ಮುಂದೂಡಿದರು. ರಾಜ್ಯಸಭೆಯಲ್ಲೂ ಇದೇ ರೀತಿ ಗದ್ದಲ ಉಂಟಾಗಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News