×
Ad

70ಲಕ್ಷದ ನೂರು ರೂಪಾಯಿ ಬಂಡಲ್‌ಗಳೊಂದಿಗೆ ವೈದ್ಯರ ಸೆರೆ

Update: 2016-11-17 16:29 IST

ಹೊಸದಿಲ್ಲಿ, ನ. 17: ಕೇಂದ್ರ ದಿಲ್ಲಿಯ ಪಹಾರ್‌ಗಂಜ್ ಪ್ರದೇಶದಲ್ಲಿ ನೂರು ರೂಪಾಯಿ ನೋಟುಗಳ ಎಪ್ಪತ್ತು ಲಕ್ಷ ರೂಪಾಯಿ ಹಣವನ್ನು ಹೊಂದಿದ್ದ ಮಕ್ಕಳ ರೋಗ ತಜ್ಞರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಬಂಧಿಸಲಾದ ವೈದ್ಯರನ್ನು ನಲ್ಲಲ್ ಎಂದು ಗುರುತಿಸಲಾಗಿದೆ. ನೋಟಿನ ಬಂಡಲ್‌ಗಳನ್ನು ಕಾರಿನೊಳಗೆ ಇರಿಸುತ್ತಿರುವುದನ್ನು ದಾರಿಹೋಕನೊಬ್ಬ ಗಮನಿಸಿದ್ದ. ಈತ ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಹಿನ್ನೆಲೆಯಲ್ಲಿ ಬುಧವಾರ ಪೊಲೀಸರು ವೈದ್ಯರನ್ನು ನೋಟುಗಳೊಂದಿಗೆ ಬಂಧಿಸಿದ್ದಾರೆ.

ಒಟ್ಟು, 69,86,000 ರೂಪಾಯಿ ಮೌಲ್ಯದ ನೂರು ರೂಪಾಯಿ ನೋಟುಗಳು ವೈದ್ಯರು ಹೊಂದಿದ್ದರು. ಕಾರಿನಲ್ಲಿ ಹಣದಿಂದ ಹೋಗುತ್ತಿದ್ದಾಗ ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಭಾರೀ ಮೊತ್ತದ ಹಣ ಪತ್ತೆಯಾಗಿತ್ತು.

ಉದ್ಯಮಿ ಗೆಳೆಯ ತೆಗೆದಿರಿಸಲು ಕೊಟ್ಟ ಹಣ ಇದೆಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ರಜೌರಿ ಗಾರ್ಡನ್‌ನಲ್ಲಿರುವ ಗೆಳೆಯನ ಮನೆಗೆ ಹಣವನ್ನು ಮರಳಿಸುವುದಕ್ಕೆ ಹೋಗುತ್ತಿದ್ದೆ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News