×
Ad

ಸುಷ್ಮಾಗೆ ಕಿಡ್ನಿ ನೀಡಲು ಮುಂದಾದ ಪೊಲೀಸ್ ಪೇದೆ

Update: 2016-11-17 21:20 IST

ಭೋಪಾಲ್, ನ. 17 : ಕಿಡ್ನಿ ವೈಫಲ್ಯದಿಂದ ದಿಲ್ಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತಮ್ಮ ಅನಾರೋಗ್ಯದ ಕುರಿತು ಟ್ವೀಟ್ ಮಾಡಿದ ಬೆನ್ನಿಗೆ ಅವರಿಗೆ ಶುಭ ಹಾರೈಕೆಯ ಸಂದೇಶಗಳ ಮಹಾಪೂರವೇ ಹರಿದು ಬಂದಿದೆ. ಇದು ಇಲ್ಲಿಗೆ ನಿಂತಿಲ್ಲ. ಮಧ್ಯ ಪ್ರದೇಶದ ಟ್ರಾಫಿಕ್ ಪೊಲೀಸ್ ಪೇದೆಯೊಬ್ಬ ತನ್ನ ಒಂದು ಕಿಡ್ನಿಯನ್ನು ಸುಷ್ಮಾ ಅವರಿಗೆ ನೀಡಲು ಮುಂದೆ ಬಂದಿದ್ದಾರೆ. 

"ನನ್ನ ಒಂದು ಕಿಡ್ನಿಯನ್ನು ಸುಶ್ಮಾಜಿಗೆ ನೀಡಲು ಬಯಸುತ್ತೇನೆ. ನನಗೆ ಅವರ ಕಿಡ್ನಿ ವೈಫಲ್ಯದ ಸುದ್ದಿ ಕೇಳಿ ದುಃಖವಾಯಿತು. ವೈದ್ಯಕೀಯ ಪರೀಕ್ಷೆಗಳಲ್ಲಿ ನನ್ನ ಕಿಡ್ನಿ ನೀಡಬಹುದು ಎಂದು ಕಂಡು ಬಂದರೆ ನಾನು ಅದನ್ನು ಅವರಿಗೆ ದಾನ ಮಾಡುತ್ತೇನೆ" ಎಂದು 26 ವರ್ಷದ ಯುವ ಪೊಲೀಸ್ ಪೇದೆ ಗೌರವ್ ಸಿಂಗ್ ಡಂಗಿ  ಹೇಳಿದ್ದಾರೆ. ಕಳೆದ ಮೂರುವರೆ ವರ್ಷಗಳಿಂದ ಗೌರವ್ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ. 

"ನಾನು ಆಕೆಯ ಕೆಲಸದಿಂದ ಪ್ರಭಾವಿತನಾಗಿದ್ದೇನೆ. ಅವರು ನಮ್ಮ ವಿದೇಶಾಂಗ ಸಚಿವರು ಹಾಗು ಉತ್ತಮ ನಾಯಕಿ. ಅದಕ್ಕಾಗಿ ನಾನು ಕಿಡ್ನಿ ನೀಡಲು ಮುಂದೆ ಬಂದಿದ್ದೇನೆ " ಎಂದು ಗೌರವ್ ಕಾರಣ ಹೇಳಿದ್ದಾರೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News