×
Ad

ಎಟಿಪಿ ಟೂರ್ ಫೈನಲ್ಸ್‌ನಿಂದ ಹಿಂದೆ ಸರಿದ ಮೊನ್‌ಫಿಲ್ಸ್

Update: 2016-11-17 22:59 IST

ಲಂಡನ್, ನ.17: ಪಕ್ಕೆಲುಬು ಗಾಯದಿಂದ ಬಳಲುತ್ತಿರುವ ಫ್ರಾನ್ಸ್‌ನ ಗಾಯೆಲ್ ಮೊನ್‌ಫಿಲ್ಸ್ ಎಟಿಪಿ ಟೂರ್ ಫೈನಲ್ಸ್‌ನಿಂದ ಹಿಂದೆ ಸರಿದಿದ್ದಾರೆ.

ಮೊನ್‌ಫಿಲ್ಸ್ ಟೂರ್ನಿಯ ಗ್ರೂಪ್ ಹಂತದ ಎರಡೂ ಪಂದ್ಯಗಳನ್ನು ಸೋತಿದ್ದು, ಸೆಮಿ ಫೈನಲ್‌ಗೆ ತಲುಪುವ ಸಾಧ್ಯತೆಯಿಲ್ಲ. ಗುರುವಾರ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್‌ರನ್ನು ಎದುರಿಸಬೇಕಾಗಿದ್ದ ಮೊನ್‌ಫಿಲ್ಸ್ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

 ಮೊನ್‌ಫಿಲ್ಸ್‌ಗೆ ಕಳೆದ ತಿಂಗಳು ಗಾಯವಾಗಿತ್ತು. ಮೊನ್‌ಫಿಲ್ಸ್ ಬದಲಿಗೆ ಬೆಲ್ಜಿಯಂನ ಡೇವಿಡ್ ಗಫಿನ್ ಆಡಲಿದ್ದಾರೆ. ಗಫಿನ್ ಸತತ ಐದನೆ ಟೂರ್ ಫೈನಲ್ಸ್‌ನ ಮೇಲೆ ಕಣ್ಣಿಟ್ಟಿದ್ದಾರೆ. ರೋಜರ್ ಫೆಡರರ್ ಆರು ಪ್ರಶಸ್ತಿಗಳನ್ನು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News