ರೈಲಿನಲ್ಲಿ ಸಾಗಿಸುತ್ತಿದ್ದ ಪಾನ್‌ಮಸಾಲ ವಶ

Update: 2016-11-17 18:37 GMT

ಮಂಜೇಶ್ವರ, ನ.17: ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಿಸಲಾಗುತ್ತಿದ್ದ ನಿಷೇಧಿತ ಪಾನ್‌ಮಸಾಲಗಳನ್ನು ಬುಧವಾರ ರಾತ್ರಿ ವಶಪಡಿಸಲಾಗಿದೆ.

ಕುಂಬಳೆ ಅಬಕಾರಿ ಅಧಿಕಾರಿಗಳು ರೈಲಿನಲ್ಲಿ ತಪಾಸಣೆ ನಡೆಸುತ್ತಿದಾಗ ಸೀಟ್ ಅಡಿಯಲ್ಲಿ 5 ಬ್ಯಾಗ್ ಮತ್ತು 1 ಗೋಣಿ ಚೀಲಗಳಲ್ಲಿ ಬಚ್ಚಿಟ್ಟ ಒಟ್ಟು 9,480 ಪ್ಯಾಕೆಟ್ ಪಾನ್‌ಮಸಾಲೆಗಳು ಕಂಡುಬಂದಿದೆ. ಆದರೆ ವಾರಸುದಾರರು ಪತ್ತೆಯಾಗಿಲ್ಲ.ಬ್ಯಾಗ್‌ನಲ್ಲಿ ಮಲಪ್ಪುರಂ ವ್ಯಕ್ತಿಯೋರ್ವನ ವಿವಾಹ ಕರೆಯೋಲೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮಲಪ್ಪುರಂಗೆ ಪಾನ್‌ಮಸಾಲ ಸಾಗಿಸಲಾಗುತ್ತಿರಬಹುದೆಂದು ಶಂಕಿಸಲಾಗಿದೆ.

 ಕಾರ್ಯಾಚರಿಸಿದ ತಂಡದಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ಎಂ.ಎ. ಬಾಬುರಾಜ್, ಟಿ. ಪವಿತ್ರನ್, ಸಿವಿಲ್ ಎಕ್ಸ್‌ಸ್ ಅಧಿಕಾರಿಗಳಾದ ಸುಜಿತ್, ರಾಜೀವನ್, ಬಾಬು, ಪ್ರಜಿತ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News