ಝಾಕೀರ್‌ ನಾಯ್ಕ್ ಐಆರ್‌ಎಫ್‌ ಕಚೇರಿಗಳ ಮೇಲೆ ಎನ್‌ಐಎ ದಾಳಿ

Update: 2016-11-19 04:05 GMT

ಮುಂಬೈ, ನ.19: ಸಂಶೋಧಕ ಝಾಕೀರ್‌ ನಾಯ್ಕ್ ಅವರ ಎನ್ ಜಿಒ ಇಸ್ಲಾಮಿಕ್ ರಿಸರ್ಚ್‌ ಫೌಂಡೇಶನ್ (ಐಆರ್‌ಎಫ್ )ಕಚೇರಿಗಳ ಮೇಲೆ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ದಾಳಿ ನಡೆಸಿದ್ದು, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದೆ.
ಮುಂಬೈ ಸೇರಿದಂತೆ ವಿವಿಧ ಕಡೆಗಳಲ್ಲಿ ಇರುವ ಐಆರ್‌ಎಫ್ ನ ಹತ್ತು ಕಚೇರಿಗಳ ಮೇಲೆ ಇಂದು ಬೆಳಗ್ಗೆ ಎನ್‌ಐಎ ದಾಳಿ ನಡೆಸಿದ್ದು, ಕಾನೂನು ಬಾಹಿರ ಚಟುವಟಿಕೆ  ನಡೆಸಿದ ಆರೋಪದಲ್ಲಿ ಝಾಕೀರ‍್ ನಾಯ್ಕ್ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.  ಎನ್ಐಎ ದಾಳಿಗೆ ಮುಂಬೈ ಪೊಲೀಸರು ಸಾಥ್ ನೀಡಿದ್ದಾರೆ.
ಸರಕಾರ ಝಾಕೀರ‍್ ನಾಯ್ಕ್ ಎನ್ ಜಿಒ ಇಸ್ಲಾಮಿಕ್ ರಿಸರ್ಚ್‌ ಫೌಂಡೇಶನ್ ಗೆ ಐದು ವರ್ಷಗಳ ನಿಷೇಧ ವಿಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಝಾಕೀರ‍್ ನಾಯ್ಕ್ ಇದೀಗ ವಿದೇಶದಲ್ಲಿದ್ದಾರೆ. ಅವರ ಐಆರ್‌ಎಫ್ ನ ಹಲವು ಮಂದಿ ಸದಸ್ಯರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News