ಶಿವಸೇನೆಗೆ 85 ಕೋಟಿ ರೂ. ದೇಣಿಗೆ ನೀಡಿದ ವೀಡಿಯೊಕೋನ್‌

Update: 2016-11-19 04:49 GMT

ಮುಂಬೈ, ನ.19: ವೀಡಿಯೊಕೋನ್‌ ಸಂಸ್ಥೆ ಶಿವಸೇನೆಗೆ ಕಳೆದ 2015-16ನೆ ಸಾಲಿನಲ್ಲಿ 85 ಕೋಟಿ ರೂ. ದೇಣಿಗೆ ನೀಡಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಹೇಳಿಕೆಯಲ್ಲಿ ಈ ವಿಚಾರ ಬಹಿರಂಗೊಂಡಿದೆ. ಶಿವಸೇನೆಯು ಕಾರ್ಪೊರೇಟ್‌ ಮತ್ತು ನಾನ್‌ ಕಾರ್ಪೋರೇಟ್ ಸಂಸ್ಥೆಗಳಿಂದ ಒಟ್ಟು 86.84 ಕೋಟಿ ರೂ. ದೇಣಿಗೆ ಪಡೆದಿದ್ದು, ವೀಡಿಯೊಕೋನ್‌ ಸಂಸ್ಥೆ ಗರಿಷ್ಠ ದೇಣಿಗೆ ನೀಡಿದೆ. ಶಿವಸೇನೆಯ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಅನಿಲ್ ದೇಸಾಯಿ ಚುನಾವಣಾ ಆಯೋಗಕ್ಕೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ವೀಡಿಯೊಕೋನ್‌ ಶರದ್‌ ಪವಾರ್‌ ಅವರ ಎನ್ ಸಿಪಿಗೆ 25 ಲಕ್ಷ ರೂ. ದೇಣಿಗೆ ನೀಡಿದೆ ಎಂದು ವೀಡಿಯೊಕೋನ್‌ ಸಂಸ್ಥೆ ಬಹಿರಂಗಪಡಿಸಿದೆ.
ಇದೇ ವೇಳೆ ವಿವಿಧ ಪಕ್ಷಗಳು ತಮಗೆ ಹರಿದು ಬಂದಿರುವ ದೇಣಿಗೆಯ ಬಗ್ಗೆ ಚುನಾವಣಾ ಆಯೋಗಕ್ಕೆ ವಿವರ ನೀಡಿದೆ. ಆದರೆ ಬಿಜೆಪಿ ಪಡೆದಿರುವ ದೇಣಿಗೆಯ ಬಗ್ಗೆ ತಿಳಿಸಿಲ್ಲ ಎಂದು ತಿಳಿದು ಬಂದಿದೆ.
ಎನ್ ಸಿಪಿಯು  ವೀಡಿಯೋಕೋನ್‌ ದೇಣಿಗೆಯನ್ನು ಹೊರತುಪಡಿಸಿ 71.78 ಲಕ್ಷ ರೂ. ದೇಣಿಗೆ ಪಡೆದಿದೆ. ಕಾಂಗ್ರೆಸ್ 22 ಕೋಟಿ ರೂ.ದೇಣಿಗೆ ಪಡೆದಿದೆ ಎಂದು ಚುನಾವಣಾ ಆಯೋಗಕ್ಕೆ ನೀಡಿರುವ ವರದಿ ತಿಳಿಸಿದೆ.


 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News