ನಾಪತ್ತೆಯಾದ ನಜೀಬ್ ಬಗ್ಗೆ ಯುವತಿಯಿಂದ ಪತ್ರ !
ಹೊಸದಿಲ್ಲಿ, ನ. 19: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಿಂದ ನಾಪತ್ತೆಯಾದ ವಿದ್ಯಾರ್ಥಿ ನಜೀಬ್‌ನನ್ನು ಅಲಿಘಡದಲ್ಲಿ ನೋಡಿದ್ದೇನೆಂದು ಯುವತಿಯೊಬ್ಬಳು ಹೇಳಿರುವುದಾಗಿ ವರದಿಯಾಗಿದೆ. ನಜೀಬ್ನ ಜೆಎನ್‌ಯು ಹಾಸ್ಟೆಲ್ ವಿಳಾಸಕ್ಕೆ ನವೆಂಬರ್ ಹದಿನಾಲ್ಕರಂದು ಪತ್ರವೊಂದು ಬಂದಿದೆ.
ನಜೀಬ್‌ನನ್ನು ಅಲಿಘಡದ ಮಾರ್ಕೆಟ್‌ನ ಮುಸ್ಲಿಂ ಮಸೀದಿ ಸಮೀಪದಲ್ಲಿ ನೋಡಿದ್ದೇನೆ ಎಂದು ಈ ಪತ್ರದಲ್ಲಿ ಆಕೆ ಹೇಳಿದ್ದಾಳೆ. ತನಗೆ ಅಪಾಯ ಉಂಟುಮಾಡಲು ಕರೆತಂದವರಿಂದ ತನ್ನನ್ನು ಪಾರು ಮಾಡಬೇಕೆಂದು ನಜೀಬ್ ಹೇಳಿಕೊಂಡನೆಂದು ಯುವತಿ ಬಹಿರಂಗಪಡಿಸಿದ್ದಾಳೆ. ಪೊಲೀಸರ ನೆರವು ಕೇಳುವ ಮೊದಲೇ ನಜೀಬ್ ಜನದಟ್ಟಣೆಯಲ್ಲಿ ಮತ್ತೆ ಮರೆಯಾಗಿದ್ದಾನೆ ಎಂದು ಅವಳು ವಿವರಿಸಿದ್ದಾಳೆ. ಪತ್ರದ ಕುರಿತು ತನಿಖೆ ಆರಂಭಿಸಿರುವುದಾಗಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಕ್ಟೋಬರ್ ಹದಿನಾಲ್ಕಕ್ಕೆ ಎಬಿವಿಪಿ ಕಾರ್ಯಕರ್ತರು ಹೊಡೆದ ನಂತರ ನಜೀಬ್ ಜೆಎನ್‌ಯು ಕ್ಯಾಂಪಸ್‌ನಿಂದ ನಾಪತ್ತೆಯಾಗಿದ್ದಾನೆ. ನಜೀಬ್ ನಾಪತ್ತೆ ಪ್ರಕರಣದಲ್ಲಿ ವಿಶ್ವವಿದ್ಯಾನಿಲಯ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತೆಂದು ವರದಿ ತಿಳಿಸಿದೆ.