×
Ad

ಅಸ್ಸಾಂನಲ್ಲಿ ಸೇನಾ ವಾಹನದ ಮೇಲೆ ಉಗ್ರರ ದಾಳಿ; ಮೂವರು ಯೋಧರು ಹುತಾತ್ಮ

Update: 2016-11-19 11:19 IST

ದಿಗ್ಬೋಯಿ, ನ.19: ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ದಿಗ್ಬೋಯಿ ಎಂಬಲ್ಲಿ ಸೇನಾ ವಾಹನದ ಮೇಲೆ ಶಂಕಿತ ಉಲ್ಫಾ ಉಗ್ರರು ನಡೆಸಿದ ಬಾಂಬ್ ದಾಳಿಯಿಂದಾಗಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ನಾಲ್ವರಿಗೆ ಗಾಯವಾಗಿದೆ.   
ತಿನ್ಸುಕಿಯಾದ ಪೆಂಗ್ರಿ ಅರಣ್ಯದಲ್ಲಿ ಭಾರತೀಯ ಸೇನೆ ಬೆಳಗ್ಗೆ 5.30ರ ಹೊತ್ತಿಗೆ  ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದಾಗ  ಯೋಧರ ವಿರುದ್ಧ ಶಂಕಿತ ಉಲ್ಫಾ ಉಗ್ರರು  ದಾಳಿ ನಡೆಸಿದ್ದಾರೆ ಎಂದು  ಎಂದು ತಿಳಿದು ಬಂದಿದೆ. ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿದಿದೆ. 
ಗಾಯಗೊಂಡಿರುವ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
ಕಳೆದ ಬುಧವಾರ ಪೆಂಗ್ರಿ ಟೀ ಎಸ್ಟೇಟ್ ನಲ್ಲಿ ಉಗ್ರರು ವಾಹನದ ಮೇಲೆ ದಾಳಿ ನಡೆಸಿ ಓರ್ವನನ್ನು ಕೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News