×
Ad

ಸ್ವಾಮಿ, 15 ಲಕ್ಷ ಕೇಳಿದ್ದು ತಪ್ಪಾಯಿತು, ಈಗ ಚಿಲ್ರೆ ಆದ್ರೂ ಕೊಡಿ

Update: 2016-11-19 11:50 IST

ಹೊಸದಿಲ್ಲಿ, ನ.19: ಮೋದಿ ಸರಕಾರ ಹಳೆಯ 500 ಹಾಗೂ 1000 ರೂ. ನೋಟುಗಳನ್ನು ನಿಷೇಧಿಸಿದಂದಿನಿಂದ ಜನಸಾಮಾನ್ಯ ಕಂಗೆಟ್ಟಿದ್ದಾನೆ. ಬ್ಯಾಂಕು, ಎಟಿಎಂಗಳ ಎದುರು ಸರತಿ ಸಾಲು ನಿಂತು ಬಸವಳಿದು ಹೋಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಂತೂ ಜನರು ಮೋದಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ಹೊರಗೆಡಹುತ್ತಲೇ ಇದ್ದಾರೆ. ಶುಕ್ರವಾರದಂದು ಟ್ವಿಟ್ಟರಿನಲ್ಲಿ 'ಛುಟ್ಟಾ_ದೇ_ದೇ-ರೆ- ಮೋದಿ' ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ಈಹ್ಯಾಶ್ ಟ್ಯಾಗ್ ಉಪಯೋಗಿಸಿ ಜನರು ತಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಂಡಿದ್ದರು. ಒಬ್ಬರು ‘‘ನನ್ನ ದೇಶ ಬದಲಾಗುತ್ತಿದೆ. ಲೈನಿನಲ್ಲಿ ನಿಲ್ಲುತ್ತಿದೆ’’ ಎಂದು ಬರೆದಿದ್ದರೆ ಇನ್ನೊಬ್ಬರು ‘‘ತಪ್ಪಾಯಿತು, ಇನ್ನು15 ಲಕ್ಷ ಕೇಳುವುದಿಲ್ಲ, ಆದರೆ ಚೇಂಜ್ ಆದರೂ ಕೊಡಿ’’ ಎಂದು ಅಂಗಲಾಚಿದ್ದರು. ಇನ್ನೊಂದು ಟ್ವೀಟಿನಲ್ಲಿ ‘‘ಐಸ್ ಕ್ರೀಂ ತಿನ್ನದೆ ಬಹಳ ದಿನಗಳಾದವು. ಈಗಲಾದರೂ ಚೇಂಜ್ ಕೊಡಿ’’ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ‘‘ಇವತ್ತು ಕೂಡ ಮೋದಿ ಗಾಳಿಯಿಲ್ಲ, ಬದಲಾಗಿ ಬಿರುಗಾಳಿಯಿದೆ. ಇದು ಅಚ್ಛೇ ದಿನ್ ಅಲ್ಲವೇನು. ಎಟಿಎಂ ಬಾಗಿಲಲ್ಲಿ ರಾಹುಲ್ ಗಾಂಧಿ ಇದ್ದಾರೆ’’ ಎಂದು ಬರೆದಿದ್ದಾರೆ.

‘‘ಬಿಜೆಪಿಯ ನಿರ್ಧಾರಗಳನ್ನು ಗೌರವಿಸಿ, ನಿಮ್ಮ ಮನೆಯಲ್ಲಿ ಖಂಡಿತವಾಗಿ ಅಗತ್ಯ ಸಾಮಗ್ರಿಗಳು ಖಾಲಿಯಾಗಿರಬಹುದು. ಧ್ವನಿಯೆತ್ತಿದರೆ ದೇಶದ್ರೋಹಿಯಾಗುತ್ತೀರಿ’’ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬಳು ಯುವತಿ ‘‘ಮನೆಗೆಲಸದಾಕೆಗೆ, ಹಾಲಿನವನಿಗೆ, ನ್ಯೂಸ್ ಪೇಪರ್ ನವನಿಗೆ ಹಾಗೂ ಧೋಬಿಗೆ ಚೆಕ್ ನೀಡಬೇಕೇನು ?’’ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News