×
Ad

ಉಪಚುನಾವಣೆ : 4ಲೋಕಸಭೆ, 8 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಶುರು

Update: 2016-11-19 12:01 IST

ಗುವಾಹಟಿ, ನ.19: ವಿವಿಧ ರಾಜ್ಯಗಳಲ್ಲಿ ಖಾಲಿಯಾಗಿದ್ದ ನಾಲ್ಕು ಲೋಕಸಭೆ ಮತ್ತು ಎಂಟು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ಮತದಾನ ಇಂದು ಬೆಳಗ್ಗೆ ಬಿಗು ಭದ್ರತೆಯಲ್ಲಿ ಆರಂಭಗೊಂಡಿದೆ.
ಕೇಂದ್ರ ಸರಕಾರ ಐನೂರು ಮತ್ತು ಸಾವಿರ ರೂ. ನೋಟ್ ನಿಷೇಧದ ಬಳಿಕ ಮೊದಲ ಚುನಾವಣೆ ನಡೆಯುತ್ತಿದ್ದು, ಕೇಂದ್ರ ಸರಕಾರದ ನೋಟು ನಿಷೇಧದ ವಿಚಾರದಲ್ಲಿ ಜನಸಾಮಾನ್ಯರು ತೀರ್ಪು ನೀಡಲಿದ್ದಾರೆ.
ಅಸ್ಸಾಂನ ಲಕ್ಮೀಪುರ, ಮಧ್ಯಪ್ರದೇಶದ ಶಾಡಾಲ್, ಪಶ್ಚಿಮ ಬಂಗಾಳದ ಕೋಚ್‌ಬಿಹಾರ್‌ ಮತ್ತು ತಾಮ್ಲುಕ್‌ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಇದರ ಜೊತೆಗೆ ಅಸ್ಸಾಂ, ಅರುಣಾಚಲ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ತ್ರಿಪುರಾ ಮತ್ತು ಪುದುಚೇರಿಯಲ್ಲಿ ಖಾಲಿ ಇರುವ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News