ಐಫೋನ್ 7, 7 ಪ್ಲಸ್ ಮೇಲೆ 29,000 ರೂ. ರಿಯಾಯಿತಿ !
ಹೊಸದಿಲ್ಲಿ, ನ.19: ಆ್ಯಪಲ್ ಬ್ರ್ಯಾಂಡ್ ಸಾಧನಗಳ ಅಭಿಮಾನಿಗಳಿಗೊಂದು ಅತ್ಯಾಕರ್ಷಕ ಆಫರ್ ಇದೆ. ಸ್ಮಾರ್ಟ್ ಫೋನ್ ಲೋಕದ ದೈತ್ಯ ಕಂಪೆನಿಯೆಂದೇ ಪರಿಗಣಿತವಾಗಿರುವ ಆಪಲ್ ತನ್ನ ಐ ಪ್ಯಾಡ್ ಹಾಗೂಲೇಟೆಸ್ಟ್ ಐ ಫೋನ್ ಮಾಡೆಲ್ ಗಳಿಗೆ ಸಿಟಿಬ್ಯಾಂಕ್ ಕಾರ್ಡ್ ಮೂಲಕ ಪಾವತಿಸುವವರಿಗೆ ರಿಯಾಯಿತಿಯೊದಗಿಸುತ್ತಿದೆ. ಐಫೋನ್ 7 (ಅಥವಾ ಐಫೋನ್ 7 ಪ್ಲಸ್) ಹಾಗೂ ಐ ಪ್ಯಾಡ್ ಖರೀದಿಸಬಯಸುವ ಗ್ರಾಹಕರಿಗೆ ಮಾತ್ರ ಈ ಆಫರ್ ಅನ್ವಯವಾಗುತ್ತದೆ.
ಐಪ್ಯಾಡ್ ಪ್ರೋ ಹಾಗೂ ಯಾವುದೇ ಐಫೋನ್ 7, 7 ಪ್ಲಸ್ ಮಾಡೆಲ್ ಜತೆಯಾಗಿ ಖರೀದಿಸಿದರೆ ಕಂಪೆನಿ ರೂ 23,000 ಕ್ಯಾಶ್ ಬ್ಯಾಕ್ ಒದಗಿಸುತ್ತದೆ. ಐಪ್ಯಾಡ್ ಏರ್ 2 ಮತ್ತು ಐಫೋನ್ 1/7 ಪ್ಲಸ್ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ರೂ. 18,000 ಕ್ಯಾಶ್ ಬ್ಯಾಕ್ ಲಭ್ಯವಿದೆ. ಐಪ್ಯಾಡ್ ಮಿನಿ 2 ಹಾಗೂ 4 ಅನ್ನು ಐಫೋನ್ 7, 7 ಪ್ಲಸ್ ಸ್ಮಾರ್ಟ್ ಫೋನ್ ಜತೆ ಖರೀದಿಸಿದವರಿಗೆ ರೂ 17,000 ರಿಯಾಯಿತಿ ಲಭ್ಯವಿದೆ.
ಮೇಲಿನ ಖರೀದಿಗಳಿಗೆ ತನ್ನ ಸ್ಟೋರ್ ಗಳಲ್ಲಿ ಕಂಪೆನಿ ಕ್ರಮವಾಗಿ ರೂ 5,900, ರೂ 2,900 ಹಾಗೂ ರೂ. 2,800 ರಿಯಾಯಿತಿ ನೀಡುವುದು. ಗ್ರಾಹಕರು ಎರಡೂ ಸಾಧನಗಳನ್ನು ಒಂದೇ ಸ್ಟೋರ್ ನಿಂದ ಒಂದೇ ದಿನ ಖರೀದಿಸಬೇಕು ಹಾಗೂ ಈ ಆಫರ್ ಈ ವರ್ಷದ ಡಿಸೆಂಬರ್ 31ರವರೆಗೆ ಮಾತ್ರ ಲಭ್ಯವಿದೆ. ಅಷ್ಟೇ ಅಲ್ಲದೆ ಪ್ರತಿ ಕಾರ್ಡ್ ಉಪಯೋಗಿಸಿ ಗರಿಷ್ಠ ನಾಲ್ಕು ಟ್ರಾನ್ಸಾಕ್ಷನ್ ಮಾಡಬಹುದಾದರೆ, ಪ್ರತಿ ತಿಂಗಳು ಕೇವಲ ಎರಡು ಟ್ರಾನ್ಸಾಕ್ಷನ್ ಮಾಡಬಹುದಾಗಿದೆ. ಕ್ಯಾಶ್ ಬ್ಯಾಕ್ ಮೊತ್ತವನ್ನು ಗ್ರಾಹಕರ ಖಾತೆಗಳಿಗೆ ಖರೀದಿ ಮಾಡಿದ ದಿನದಿಂದ 90 ಬಿಸಿನೆಸ್ ದಿನಗಳೊಳಗಾಗಿ ಜಮೆ ಮಾಡಲಾಗುವುದು. ಈ ಆಫರ್ ಸಿಟಿಬ್ಯಾಂಕ್ ಕಾರ್ಪೊರೇಟ್ ಕ್ರೆಡಿಟ್ ಕಾರ್ಡುಗಳ ಮೇಲೆ ಲಭ್ಯವಿಲ್ಲ.