×
Ad

ರಾಜಸ್ಥಾನದಲ್ಲಿ ಹಳಿ ತಪ್ಪಿದ ರೈಲು : 12 ಮಂದಿಗೆ ಗಾಯ

Update: 2016-11-19 12:56 IST

ಶ್ರೀಗಂಗಾನಗರ, ನ.19: ಭಾಟಿಂಡಾ -ಜೋಧ್ ಪುರ  ನಡುವೆ ಸಂಚರಿಸುವ ಪ್ರಯಾಣಿಕರ ರೈಲು ಇಂದು ಬೆಳಗ್ಗೆ ರಾಜಸ್ಥಾನದ ಶ್ರೀಗಂಗಾನಗರ ರಾಜ್ಯಸಾರ್‌ ಎಂಬಲ್ಲಿ  ಹಳಿ ತಪ್ಪಿದ ಪರಿಣಾಮವಾಗಿ 12 ಮಂದಿ ಗಾಯಗೊಂಡಿದ್ದಾರೆ.

ಈ ಘಟನೆಯ ಬಳಿಕ ಈ ಹಳಿಯಲ್ಲಿ ಸಂಚರಿಸುವ ರೈಲುಗಳ ಓಡಾಟ ರದ್ಧಾಗಿದೆ. ಜೈಪುರ-ಸೂರತ್‌ಗರ್‌, ಲಾಲ್‌ಗರ‍್-ಅಬೋಹರ್‌ ಪ್ಯಾಸೆಂಜರ್‌ ಮತ್ತು ದಿಲ್ಲಿ-ಬಿಕಾನೆರ‍್ ರೈಲುಗಳ ಓಡಾಟ ಸ್ಥಗಿತಗೊಂಡಿದೆ.
ಹಳಿ ತಪ್ಪಿರುವ ರೈಲು ಬೋಗಿಗಳನ್ನು ಹಳಿಯಿಂದ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News